ಮುನೇನಕೊಪ್ಪ ಅವರ ಸ್ವಾಗತಕ್ಕೆ ಸಿದ್ದವಾದ ಸಚಿವ ಸಂತೋಷ ಲಾಡ…!!!?

ಧಾರವಾಡ: ಭಾರತೀಯ ಜನತಾ ಪಕ್ಷದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೇ ಸ್ವಾಗತಿಸಲಾಗುವುದೆಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ ಹೇಳಿದರು.
ನಗರದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಸಚಿವ ಲಾಡ್, ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವೈಯಕ್ತಿಕವಾಗಿ ಮನಸ್ಸಿಲ್ಲ. ಆದರೆ, ಪಕ್ಷ ಹೇಳಿದರೇ ಎಲ್ಲರೂ ಮಾಡಬೇಕಾಗತ್ತೆ ಎಂದರು.
ಮಾಜಿ ಸಚಿವ ಮುನೇನಕೊಪ್ಪ ಅವರ ಬಗ್ಗೆ ವದಂತಿ ಹಬ್ಬಿದೆಯಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ನಂಗೇನೂ ಗೊತ್ತಿಲ್ಲ. ಅವರು ಬಂದ್ರೆ ಸ್ವಾಗತಿಸುತ್ತೇನೆ ಎಂದರು.
ಪಕ್ಷದ ಪ್ರತಿಯೊಬ್ಬರ ಮೇಲೂ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಒತ್ತಡ ಇದೆ. ಅದನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಚಿವ ಸಂತೋಷ ಲಾಡ ತಿಳಿಸಿದರು.