ಮಾಜಿ ಕಾರ್ಪೋಟರ್ ಕಚೇರಿಯಲ್ಲೇ ಮ್ಯಾನೇಜರ್ ಕೊಲೆ…!?

ಕುಟುಂಬಸ್ಥರು ಘಟನೆಯ ಬಗ್ಗೆ ಹೇಳಿದ್ದಿಷ್ಟು: ಮಾಜಿ ಕಾರ್ಪೋರೇಟರ್ ಧನರಾಜ್ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಮಾಜಿ ಕಾರ್ಪೊರೇಟರ್ ಅವರ ಕಚೇರಿಯಲ್ಲೇ ವ್ಯಕ್ತಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರ್ಪೋರೇಟರ್ ಆಫೀಸಿನಲ್ಲೇ ವ್ಯಕ್ತಿ ಸಾವನ್ನಪ್ಪಿರುವುದು ಇದೀಗ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನ ಧರ್ಮರಾಯಸ್ವಾಮಿ ಟೆಂಪಲ್ ವಾರ್ಡ್ನ ಮಾಜಿ ಸದಸ್ಯ ಧನರಾಜ್ ಅವರ ಕಚೇರಿಯಲ್ಲಿ ನಿಗೂಢ ಸಾವು ಸಂಭವಿಸಿದೆ. ಮೂಲತಃ ತಮಿಳುನಾಡಿದ ಮಧುರೈ ಜಿಲ್ಲೆಯ ಪಾಂಡಿ ಪ್ರಭು ಮಾಜಿ ಕಾರ್ಪೊರೇಟರ್ ಧನರಾಜ್ ಅವರ ಕಚೇರಿಯಲ್ಲೇ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಬೇರೆ ಇಬ್ಬರು ಯುವಕರ ಜೊತೆಯಲ್ಲಿ ಪಾಂಡಿ ಧನರಾಜ್ ಅವರ ಆಫೀಸಿನಲ್ಲೇ ಮಲಗಿದ್ರು. ಆದರೆ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಭು ಮೃತದೇಹ ಪತ್ತೆಯಾಗಿದೆ.

ಕುಟುಂಬಸ್ಥರು ಘಟನೆಯ ಬಗ್ಗೆ ಹೇಳಿದ್ದಿಷ್ಟು: ಮಾಜಿ ಕಾರ್ಪೋರೇಟರ್ ಧನರಾಜ್ ಕಡೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ 2-3 ದಿನಗಳಿಂದ ಧನರಾಜ್ ಯಾವುದೋ ಕೇಸ್ ಸಂಬಂಧ ಪೊಲೀಸ್ ಠಾಣೆಗೆ ಹೋಗಿ ಬರುತ್ತಿದ್ದರು. ಜೊತೆಗೆ ಯಾವುದೋ ವಿಚಾರಕ್ಕೆ ಜಾಮೀನಿಗೆ ಸಹಿ ಹಾಕುವಂತೆ ಪಾಂಡಿ ಪ್ರಭುಗೆ ಒತ್ತಾಯ ಮಾಡಲಾಗ್ತಿತ್ತು. ಧನರಾಜ್ ಹೇಳಿದ್ದರಿಂದ ಜಾಮೀನಿಗೆ ಪಾಂಡಿ ಪ್ರಭು ಸಹಿ ಮಾಡಿದ್ರು. ಇದೇ ಕಾರಣಕ್ಕೇ ಧನರಾಜ್ ಕಡೆಯವರೇ ಕೊಲೆ ಮಾಡಿಸಿದ್ದಾರೆ ಎಂದು ಪ್ರಭು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಕುಟುಂಬಸ್ಥರು ಬರುವುದಕ್ಕೂ ಮೊದಲೇ ಪಾಂಡಿ ಮೃತದೇಹವನ್ನು ಕಲಾಸಿಪಾಳ್ಯ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾಜಿ ಕಾರ್ಪೋರೇಟರ್ ಧನರಾಜ್ ಘಟನೆಯ ಬಗ್ಗೆ ಹೇಳಿದ್ದಿಷ್ಟು: ಕಳೆದ ಒಂದು ತಿಂಗಳುಗಳಿಂದ ಪಾಂಡಿ ಸ್ವಲ್ಪ ಡಲ್ ಆಗಿದ್ದ, ವಿಚಾರ ಏನು ಎಂದು ನನಗೆ ಗೊತ್ತಿಲ್ಲ. ಆದರೆ ರಾತ್ರಿ ನಮ್ಮ ಆಫೀಸಿನ ಮೇಲೆಯೇ ಹ್ಯಾಂಗ್ ಮಾಡಿಕೊಂಡಿದ್ದಾನೆ ಅಂತ ನಮ್ಮಹುಡುಗರು ಬೆಳಗ್ಗೆ ಸುಮಾರು 7.30ಕ್ಕೆ ಫೋನ್ ಮಾಡಿ ವಿಚಾರ ತಿಳಿಸಿದ್ರು. ಸದ್ಯ ಕಳೆದ ಒಂದು ವಾರದಿಂದ ನಾನು ಪಾಂಡಿಚೇರಿಯಲ್ಲಿದ್ದೇನೆ. ನನ್ನ ಬಳಿ ಆತ ಯಾವುದೇ ವಿಚಾರ ಹೇಳಿಕೊಂಡಿಲ್ಲ. ಒಂದೆರಡು ದಿನಗಳಿಗೊಮ್ಮೆ ನಾನು ಆತನಿಗೆ ಫೋನ್ ಮಾಡ್ತಿದ್ದೆ. ಆದರೆ, ಈ ಎಲೆಕ್ಷನ್ ಬ್ಯುಸಿಯಲ್ಲಿ ಕಳೆದ 5 ದಿನಗಳಿಂದ ನಾನು ಆತನಿಗೆ ಫೋನ್ ಕೂಡಾ ಮಾಡಿಲ್ಲ. ಆದ್ರೆ ಮನೆಯ ಯಾವುದೋ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವ ಸಂಶಯವಿದೆ. ಆತ ತುಂಬಾ ಒಳ್ಳೆ ಹುಡ್ಗ, ಯಾಕೆ ಹೀಗೆ ಮಾಡ್ಕೊಂಡ ಅಂತ ಗೊತ್ತಾಗ್ತಿಲ್ಲ. ನನ್ನ ಬಳಿ 8 ವರ್ಷಗಳಿಂದ ಕೆಲ್ಸಕ್ಕಿದ್ದ. ಯಾಕೆ ಹೀಗೆ ಮಾಡ್ಕೊಂಡ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಎರಡು ಕಡೆಯ ಹೇಳಿಕೆಯ ನಂತರ ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡಿದ್ದು, ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.