ಮಾಜಿ ಸಿಎಂ ಸಿದ್ಧರಾಮಯ್ಯ ಸೀಲ್ ಡೌನ್ ಏರಿಯಾದಲ್ಲಿ: ವಿವಿಧ ಕಾಮಗಾರಿಗಳಿಗೆ ಚಾಲನೆ
ಬದಾಮಿ: ಕೊರೋನಾದಿಂದ ಸೀಲ್ ಡೌನ್ ಆಗಿರುವ ಬಾದಾಮಿ ವಿಧಾನಸಭೆ ಕ್ಷೇತ್ರದ ಡಾಣಕ ಶಿರೂರು ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
ಸೀಲ್ ಡೌನ್ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೇಯಾ, ಅಗತ್ಯ ವಸ್ತುಗಳು ಸಿಗುತ್ತಿವೇಯಾ, ಇಲ್ವಾ ಎಂಬ ಪ್ರಶ್ನೆಗಳನ್ನ ಕೇಳಿದ ಬದಾಮಿ ಶಾಸಕ ಸಿದ್ಧರಾಮಯ್ಯ, ಯಾವುದೇ ತೊಂದರೆಯಾದರೂ ತಮ್ಮನ್ನ ಸಂಪರ್ಕಿಸಬಹುದೆಂದು ಹೇಳಿದರು.
ಇದಕ್ಕಿಂತ ಪೂರ್ವದಲ್ಲಿ ಬಾದಾಮಿಯಲ್ಲಿ ಹತ್ತು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.