Big Exclusive ಹಳೇಹುಬ್ಬಳ್ಳಿಯಲ್ಲೊಂದು “ನಾಗರಿಕ ಸಮಾಜ” ತಲೆತಗ್ಗಿಸುವ ಘಟನೆ- ಪೊಲೀಸರಿಂದ ಕಠಿಣ ಕ್ರಮ…
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವೊಂದು ನಡೆದಿದ್ದು, ಪೊಲೀಸರು ಘಟನೆಯ ಆಳಕ್ಕೀಳಿದು ಪ್ರತಿಯೊಬ್ಬರನ್ನೂ ವಶಕ್ಕೆ ಪಡೆದಿರುವ ಖಚಿತ ಮಾಹಿತಿ ಕರ್ನಾಟಕವಾಯ್ಸ್.ಕಾಂ ಲಭಿಸಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವಕರು “84” ಮಹಿಳೆಯೊಂದಿಗೆ ಅಸಭ್ಯವಾಗಿ ಬಟ್ಟೆ ಬಿಚ್ಚಿ ವರ್ತಿಸಿ, ವೀಡಿಯೋ ಮಾಡಿಕೊಂಡಿದ್ದು, ಅದು ಸ್ಥಳೀಯರಿಗೆ ಗೊತ್ತಾಗಿದೆ. ಇದರಿಂದ ರೋಸಿ ಹೋದ ಸ್ಥಳೀಯರು ಇಬ್ಬರು ಯುವಕರ ತಲೆ ಬೋಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆಯ ಜೊತೆ “ಹಾಗೇಲ್ಲ” ಮಾಡಿರುವ ವೀಡಿಯೋ ಮತ್ತು ಯುವಕರ ಜೊತೆ ಹಿರಿಯರು ನಡೆದುಕೊಂಡ ರೀತಿ ಅನಾಗರಿಕವಾದ ಪರಿಣಾಮ, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕೆಲವೇ ಸಮಯದಲ್ಲಿ ಪ್ರಕರಣದ ಇಂಚಿಂಚೂ ಮಾಹಿತಿ ನೀಡುವವರಿದ್ದು, ಕರ್ನಾಟಕವಾಯ್ಸ್.ಕಾಂ ಅದನ್ನ ತಮಗೆ ತಿಳಿಸಿದೆ.
