100% ಎಕ್ಸಕ್ಲೂಸಿವ್ ಪೋಟೊ: ಪ್ರೂಟ್ ಇರ್ಫಾನ್ ಹತ್ಯೆ- ಶೂಟ್ ಮಾಡಿದವರು ಹೇಗಿದ್ದಾರೆ ಗೊತ್ತಾ..?
ಹುಬ್ಬಳ್ಳಿ: ಹಾಡುಹಗಲೇ ರೌಡಿ ಷೀಟರ್ ಇರ್ಪಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆಗೆ ಸುಪಾರಿ ನೀಡಿದ್ದ ವ್ಯಕ್ತಿ ಸಮೇತ ಮೂವರು ಶೂಟರ್ಸ್ ಗಳನ್ನ ಬಂಧಿಸಿ ಹುಬ್ಬಳ್ಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್ ಹೊಟೇಲ್ ಮುಂದುಗಡೆ ಆಗಸ್ಟ್ ಮೊದಲ ವಾರದಲ್ಲಿ ನಡೆದಿದ್ದ ಕೊಲೆಯ ರೂವಾರಿಗಳ ಹುಡುಕಾಟಕ್ಕೆ ಹಳೇಹುಬ್ಬಳ್ಳಿ ಪೊಲೀಸರು ನಿರಂತರವಾಗಿ ಪ್ರಯತ್ನ ಮಾಡಿದ್ದು, ಅದೀಗ ಯಶಸ್ವಿಯಾಗಿದೆ.
ಬಾಂಬೆಯಿಂದ ಕರೆ ತಂದಿರುವ ಮೂವರನ್ನ ನೀಲೇಶ ಗೋವಿಂದ ನಾಡಗಾಂವಕರ್, ಸುನೀಲ ಬನಸೂಡೆ ಅಲಿಯಾಸ್ ಮಾಮಾ ದೇವರಾಂ ಬನಾವುರಿ ಹಾಗೂ ನವನಾಥ ಅರ್ಜುನ ಡೋಲಾಸ್ ಎಂದು ಗುರುತಿಸಲಾಗಿದೆ. ಇವರಿಗೆ ಸುಪಾರಿ ನೀಡಿದ್ದ ವ್ಯಕ್ತಿಯನ್ನ ರಾಜೇಂದ್ರಸಿಂಗ್ ಮೋಹನಸಿಂಗ್ ರಾಹುತ್ ಅಲಿಯಾಸ್ ರಾಜು ನೇಪಾಳಿ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಬ್ಬಳ್ಳಿ ಧಾರವಾಡ ಮೂಲದ ಸಾಪ್ಟವೇರ್ ಅನಲೈಸರ್ ಆಗಿದ್ದ ಧಾರವಾಡ ಮಣಕಿಲ್ಲಾ ನಿವಾಸಿ ಅಫ್ತಾಬ ಮಹಮ್ಮದಲಿ ಬೇಪಾರಿ, ಸ್ಕ್ರ್ಯಾಫ್ ವ್ಯವಹಾರ ಮಾಡುತ್ತಿದ್ದ ಧಾರವಾಡ ಶೇಖ ಕಂಪೌಂಡ ಮಾಳಾಪುರ ನಿವಾಸಿ ತೌಸೀಫ ಸಾಧಿಕ ನಿಪ್ಪಾಣಿ, ಧಾರವಾಡ ಮೆಣಸಿನಕಾಯಿ ಓಣಿ ಮದಾರಮಡ್ಡಿಯ ವಿದ್ಯಾರ್ಥಿ ಅತಿಯಾಬಖಾನ ಅಮಾನುಲ್ಲಾಖಾನ ತಡಕೋಡ, ಇಸ್ಲಾಂಪೂರ ರಸ್ತೆ ಹಳೇಹುಬ್ಬಳ್ಳಿ ನಿವಾಸಿ ವಿದ್ಯಾರ್ಥಿ ಅಮೀರ ಮಹಮ್ಮದಶಫಿ ತಮಟಗಾರ ಹಾಗೂ ಲಾರಿ ವ್ಯವಹಾರ ಮಾಡುತ್ತಿರುವ ಧಾರವಾಡದ ಬಡಿಗೇರ ಓಣಿ ಮದಿಹಾಳ ನಿವಾಸಿ ಮೋಹಿನ್ ದಾದಾಸಾಬ ಪಟೇಲ ಸೇರಿದಂತೆ ಮೈಸೂರಿನ ಶಹಜಾನ್ ಮತ್ತು ಸೈಯದ್ ಸೋಹೈಲ್ ಎಂಬ ಏಳು ಜನರನ್ನ ಬಂಧನ ಮಾಡಲಾಗಿದೆ.
ಪ್ರಕರಣದ ಬೆನ್ನು ಹತ್ತಿದ್ದ ಹಳೇಹುಬ್ಬಳ್ಳಿ ಠಾಣೆಯ ಇನ್ಸ್ ಪೆಕ್ಟರ ಶಿವಾನಂದ ಕಮತಗಿ, ಸಿಸಿಬಿ ಇನ್ಸ್ ಪೆಕ್ಟರ್ ಅಲ್ತಾಪ ಮುಲ್ಲಾ ಸೇರಿದಂತೆ ಸಿಬ್ಬಂದಿಗಳಾದ ಕೃಷ್ಣಾ ಕಟ್ಟಿಮನಿ, ಅಂಬಿಗೇರ, ವಸಂತ ಮತ್ತು ನಾಯ್ಕ ಪರಿಶ್ರಮ ಸಫಲವಾಗಿದೆ.