ಇಂತಹ ದೃಶ್ಯವನ್ನ ಎಂದೂ ನೀವೂ ಊಹಿಸಲು ಸಾಧ್ಯವಿಲ್ಲ… ಇಡೀ ರಾಜ್ಯವೇ ಅಚ್ಚರಿ ಪಡುವ ಸ್ಟೋರಿಯಿದು…
1 min readದೇವರ ಮುಂದೆ ನಡೀತು ಆಣೆ ಪ್ರಮಾಣ
ಹತ್ತು ಲಕ್ಷ ಖರ್ಚು ಮಾಡಿದರೂ ಸಿಗದ ಅಧಿಕಾರ
ತುಮಕೂರು: ತೀರಾ ವಿರಳವಾದ ಮತ್ತೂ ವಿಚಿತ್ರವಾದ ಘಟನೆಯೊಂದು ಹೇರೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದ್ದು, ಎಲ್ಲರೂ ಬಿಚ್ಚಿ ಬೀಳುವಂತಿದೆ.
ಮೊದಲು ಈ ವೀಡಿಯೋವನ್ನ ನೋಡಿಬಿಡಿ…
ಪ್ರಮುಖ ಅಂಶಗಳು..
ಹೇರೂರು ಗ್ರಾಮ ಪಂಚಾಯತಿಯಲ್ಲಿ ಹೈ ಡ್ರಾಮಾ.
ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಬೆಂಬಲಿತ ಸದಸ್ಯನಿಂದ ಆಣೆ ಪ್ರಮಾಣ.
ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾನು ಸೋತಿದಕ್ಕೆ ಇತರ ಸದಸ್ಯರನ್ನು ಆಣೆ ಪ್ರಮಾಣ ಮಾಡಿಸಿದ ಶ್ರೀಧರ್.
13 ಸದಸ್ಯರ ಬಲ ಇರುವ ಗ್ರಾ.ಪಂ.
ಅಧ್ಯಕ್ಷ ಸ್ಥಾನದ ಗೆಲುವಿಗೆ 7 ಮತಗಳ ಅವಶ್ಯಕತೆ ಇತ್ತು
ತಾನು ಸೇರಿದಂತೆ ಒಟ್ಟು 7 ಸದಸ್ಯರಿಗೆ ಆಮಿಷವೊಡ್ಡಿ ಪ್ರವಾಸಕ್ಕೆ ಕರೆದುಕೊಂಡಿದ್ದ ಶ್ರೀಧರ್.
ವಿವಿಧ ಯಾತ್ರಾ ಸ್ಥಳ, ಪ್ರವಾಸಿ ತಾಣ ಸುತ್ತಿಸಿದ್ದ ಶ್ರೀಧರ್.
ಸುಮಾರು 10 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದ.
ಪ್ರವಾಸಕ್ಕೆ ಹೋದವರೆಲ್ಲರೂ ಮತ ಹಾಕಿದ್ದರೆ ಕಾಂಗ್ರೆಸ್ ಬೆಂಬಲಿತ ಸದಸ್ಯ ಶ್ರೀಧರ್ ಗೆದ್ದು ಅಧ್ಯಕ್ಷನಾಗಬೇಕಿತ್ತು.
ಆದರೆ ಒಬ್ಬರು ಅಡ್ಡ ಮತದಾನ ಮಾಡಿದ್ದರಿಂದ ಸೋತ ಶ್ರೀಧರ್.
ಅಧ್ಯಕ್ಷರಾಗಿ ಜೆಡಿಎಸ್ ನ ನಾಗರಾಜು ಆಯ್ಕೆ.
ಇದರಿಂದ ಆಕ್ರೋಶಗೊಂಡ ಶ್ರೀಧರನಿಂದ ಆಣೆ ಪ್ರಮಾಣ.
ಹೆಬ್ಬೂರಿನ ಚಿಕ್ಕಣ್ಣ ಸ್ವಾಮಿ ದೇವಸ್ಥಾನದಲ್ಲಿ ಕರ್ಪೂರ ಹಚ್ಚಿ ಆಣೆ ಪ್ರಮಾಣ.
ನನಗೆ ಮೋಸ ಮಾಡಿದವರ ಕುಟುಂಬ ಸರ್ವನಾಶ ಆಗಲಿ ಎಂದು ಕರ್ಪುರ ಹಚ್ಚಿ ಪ್ರಾರ್ಥನೆ ಮಾಡಿದ ಶ್ರೀಧರ್.
ತಾನು ಪ್ರವಾಸಕ್ಕೆ ಕರೆದುಕೊಂಡು ಹೋದ 6 ಜನ ಸದಸ್ಯರಿಂದಲೂ ಪ್ರಮಾಣ ಮಾಡಿಸಿದ ಶ್ರೀಧರ್.