EXCLUSIVE- ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚೋ ಮಾತು: ಧಾರವಾಡ ಜಿಲ್ಲೆಯಲ್ಲಿ ಏನೂ ನಡೀತಿದೆ..?

ಧಾರವಾಡ: ಕೊರೋನಾ ಪಾಸಿಟಿವ್ ಬಂದಿದೆಯಂದು ವೃದ್ಧನೋರ್ವ ಆತ್ಮಹತ್ಯೆಗೆ ಶರಣಾದ ಪ್ರಕರಣ ವಿಕೋಪಕ್ಕೆ ಹೋಗಿ ಪೊಲೀಸರ ವಾಹನಕ್ಕೆ ಬಡಿದು, ಬೆಂಕಿ ಹಚ್ಚಿ ಎನ್ನುವ ಆಕ್ರೋಶದ ಮಾತುಗಳನ್ನ ಮಹಿಳೆಯರಾಡಿದ ಘಟನೆ ಅಣ್ಣಿಗೇರಿ ತಾಲೂಕಿನ ದುಂದೂರ ಗ್ರಾಮದಲ್ಲಿ ನಡೆಯಿತು.
ಘಟನೆಯ ಎಕ್ಸಕ್ಲೂಸಿವ್ ದೃಶ್ಯಗಳು
ದುಂದೂರ ಗ್ರಾಮದ ಕಲ್ಲನಗೌಡ ಕಡಪಟ್ಟಿ ಎಂಬ ವೃದ್ಧ ಪಾಸಿಟಿವ್ ಬಂದಿದೆ ಎಂದುಕೊಂಡು ತಮ್ಮ ಜಮೀನಿನ ಹೊಲಕ್ಕೋಗಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯವರ ಮೇಲೆ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದರು.
ಪಿಎಸೈ ಜೂಲಕಟ್ಟಿ ವಾಹನಕ್ಕೆ ಬೆಂಕಿ ಹಚ್ಚಿ ಎಂದು ಕೆಲ ಮಹಿಳೆಯರು ಸಿಟ್ಟಿಗೆದ್ದರು. ಇನ್ಸ್ ಪೆಕ್ಟರ್ ಚಂದ್ರಶೇಖರ ಮಧ್ಯಸ್ತಿಕೆ ವಹಿಸಿ, ಪರಿಸ್ಥಿತಿಯನ್ನ ಶಾಂತಗೊಳಿಸಿದರು. ಕೆಲವರು ಪೊಲೀಸ್ ವಾಹನವನ್ನ ಬಡಿದು ಆಕ್ರೋಶವ್ಯಕ್ತಪಡಿಸಿದರು.
ಪ್ರಕರಣದಿಂದ ಗ್ರಾಮದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ವೈದ್ಯರು ಸರಿಯಾದ ಸಮಯಕ್ಕೆ ಬಾರದಿರುವುದೇ ಇಷ್ಟೇಲ್ಲ ಗೊಂದಲಕ್ಕೆ ಕಾರಣವಾಗಿತ್ತು.