ಸಿಬಿಐ ಮಾಜಿ ನಿರ್ದೇಶಕ-ಮಾಜಿ ರಾಜ್ಯಪಾಲ ನೇಣಿಗೆ ಶರಣು
ಅಸ್ಸಾಂ: ದೇಶದ ಮಹೋನ್ನತ ಹುದ್ದೆಗಳಲ್ಲಿ ಒಂದಾಗಿರುವ ಸಿಬಿಐ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ನಾಗಾಲ್ಯಾಂಡ್ ಮಾಜಿ ರಾಜ್ಯಪಾಲರೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಶಿಮ್ಲಾದ ತಮ್ಮದೇ ನಿವಾಸದಲ್ಲಿ ಪತ್ತೆಯಾಗಿದೆ.
ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಡೆತ್ ನೋಟ್ ನಲ್ಲಿ ಯಾವ ಕಾರಣಕ್ಕೆ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದೇನೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯಿಲ್ಲವಾದರೂ, ಡೆತ್ ನೋಟ್ ನ್ನ ಮೃತರ ಕುಟುಂಬದವರು ದೃಢಿಕರಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಅಶ್ವನಿಕುಮಾರರು 2006 ರಿಂದ 2008ರ ವರೆಗೆ ಡಿಜಿಪಿಯಾಗಿ ಹಿಮಾಚಲಪ್ರದೇಶದಲ್ಲಿ ಕಾರ್ಯನಿರ್ವಹಿಸಿದ್ದರು. ಇದಾದ ಮೇಲೆ ಎರಡು ವರ್ಷಗಳಕಾಲ ಸಿಬಿಐನಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ಮಣಿಪುರ ಮತ್ತು ನಾಗಾಲ್ಯಾಂಡನ ರಾಜ್ಯಪಾಲರಾಗಿದ್ದರು.
ಈ ಬಗ್ಗೆ ಶಿಮ್ಲಾ ಎಸ್ಪಿ ಮೋಹಿತ ಚಾವ್ಲಾ, ವಿವರಣೆ ನೀಡಿದ್ದು, ನೇಣು ಬಿಗಿದುಕೊಂಡಿದ್ದು ಎಂಬುದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.