ಸೋಮವಾರ ಬಂದ್ ಹಿನ್ನೆಲೆ: ಬಿಎ/ಬಿಕಾಂ ಪರೀಕ್ಷೆ ಮುಂದೂಡಿಕೆ: ಕವಿವಿ
ಧಾರವಾಡ: ಸೋಮವಾರ ರೈತರ ಪ್ರತಿಭಟನೆ ಇರುವುದರಿಂದ ಅಂದು ನಡೆಯಬೇಕಾಗಿದ್ದ ಸ್ನಾತಕ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ತಿಳಿಸಿದೆ.
ಈ ಬಗ್ಗೆ ಸುತ್ತೋಲೆಯನ್ನ ಹೊರಡಿಸಿರುವ ಕವಿವಿ, ಕರ್ನಾಟಕ ರಾಜ್ಯದ ವಿವಿಧ ರೈತ ಸಂಘಟನೆಗಳು ಸೆಪ್ಟಂಬರ್ 28ರಂದು ರಸ್ತೆ ತಡೆ ಹಾಗೂ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ ಸಂಭವಿದೆಯಾದ್ದರಿಂದ ಅಂದು ನಡೆಯಬೇಕಿದ್ದ ಸ್ನಾತಕ/ದೂ ಸಂಪರ್ಕ ಶಿಕ್ಷಣದಡಿ ಬರುವ ಬಿ.ಎ/ಬಿಕಾಂ ಪರೀಕ್ಷೆಗಳನ್ನ ಮುಂದೂಡಲಾಗಿದೆ ಎಂದು ತಿಳಿಸಿದೆ.
ಮುಂದೂಡಿದ ವಿಷಯದ ಪರೀಕ್ಷೆಗಳ ದಿನಾಂಕವನ್ನ ಸಧ್ಯದಲ್ಲೇ ತಿಳಿಸಲಾಗುವುದೆಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯ ಮಾಪಾನ ವಿಭಾಗ ತಿಳಿಸಿದೆ.