ರುಂಡ-ಮುಂಡ ಪ್ರಕರಣ- ಹಿರೋಯಿನ್ ವಿಚಾರಣೆ…!

ಹುಬ್ಬಳ್ಳಿ: ನಗರ ಹಾಗೂ ಹೊರವಲಯದಲ್ಲಿ ಸುತ್ತಮುತ್ತ ರುಂಡ ಮುಂಡ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗದ ನಟಿಯೊಬ್ಬರನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಇಂದು ತೀವ್ರ ವಿಚಾರಣೆ ನಡೆಸಿದರು.

ರಾಕೇಶ ಕಾಟವೆ ಎಂಬಾತನ ಕೊಲೆ ನಡೆದ ಬಗ್ಗೆ ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಮಾಹಿತಿಯನ್ನ ಪೊಲೀಸರು ಇನ್ನೂ ಕಲೆ ಹಾಕುತ್ತಿದ್ದಾರೆ. ಘಟನೆಯಲ್ಲಿ ಪ್ರಮುಖ ಆರೋಪಿಯಾಗಿರುವ ನಿಯಾಜ ಅಹ್ಮದ, ಚಿತ್ರನಟಿಯೊಂದಿಗೆ ಪ್ರೀತಿ ಮಾಡುತ್ತಿದ್ದ.
ಹತ್ಯೆಯಾಗಿರುವ ರಾಕೇಶ ಕಾಟವೆಯ ಸಹೋದರಿಯೇ ಚಿತ್ರನಟಿಯಾಗಿದ್ದು, ಅವರೊಂದಿಗೆ ಕಳೆದ ಎರಡು ವರ್ಷದ ಹಿಂದೆಯೇ ಸಂಪರ್ಕ ಬಿಟ್ಟಿದ್ದ ಎಂದು ಹೇಳಲಾಗಿದೆ.
ಇಂದು ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಕರೆಸಿಕೊಂಡ ಚಿತ್ರನಟಿ ಹಾಗೂ ಹತ್ಯೆಯಾದವನ ಸಹೋದರಿಯನ್ನ ಪೊಲೀಸರು ಸುಮಾರು ಆರು ಗಂಟೆ ವಿಚಾರಣೆ ನಡೆಸಿದರು. ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿಚಾರಣೆಯನ್ನ ಮಾಡಿದ್ದಾರೆ.