ಸೋಲು ಗೆಲುವಿನ ಲೆಕ್ಕಾಚಾರ: ಬಿತ್ತು ಚೂರಿಯೇಟು- ಸಾವು ಬದುಕಿನ ನಡುವೆ ಹೋರಾಟ

ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆ ಎದುರಿಸಿ ಗ್ರಾಮಕ್ಕೆ ಬಂದು ಮತ್ತದೇ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ವ್ಯಕ್ತಿಯೋರ್ವ ಚಾಕುವಿನಿಂದ ಇರಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲೀಗ ನಡೆದಿದೆ.
ಗ್ರಾಮದ ಚಹಾ ಅಂಗಡಿ ಬಳಿ ರಾಜಕೀಯ ಚರ್ಚೆ ವೇಳೆಯಲ್ಲಿ ಚಾಕು ಹಾಕಲಾಗಿದ್ದು, ಕೊಡ್ಲಾ ಗ್ರಾಮದ ಗುರುಲಿಂಗಪ್ಪ ಅವರ ಕುತ್ತಿಗೆಗೆ ಅದೇ ಗ್ರಾಮದ ವೆಂಕಟರೆಡ್ಡಿ ಎಂಬಾತ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗುರುಲಿಂಗಪ್ಪ ಬಣದ ವ್ಯಕ್ತಿ ಚುನಾವಣೆಯಲ್ಲಿ ಗೆದ್ದಿದ್ದು ಅದೇ ವಿಷಯವಾಗಿ ಚರ್ಚೆ ನಡೆಸಲಾಗುತ್ತಿತ್ತು. ಕೆಲವರು ತಮಗೆ ಮತವನ್ನ ಹಾಕಲಿಲ್ಲ. ಆದರೂ, ನಾವು ಗೆದ್ದು ಬಂದಿದ್ದೇವೆ ಎಂದು ಹೇಳಿಕೊಂಡಿದ್ದರಿಂದ ಆಕ್ರೋಶಗೊಂಡ ವೆಂಕಟರೆಡ್ಡಿ ಗುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸರನ್ನ ಗ್ರಾಮಕ್ಕೆ ಕಳಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆ ಮುಗಿದರೂ