ತಿರುಕನ ಕನಸು: ಚುನಾವಣೆ ಅಖಾಡಾದಲ್ಲಿ ಭಿಕ್ಷುಕ…!
1 min readಮೈಸೂರು: ಊರ ಒಳಗೆ, ಮನೆ ಒಳಗೆ, ಮನೆ, ಜಗುಲಿ ಮೇಲೆ, ಪಂಚಾಯಿತಿ ಕಟ್ಟೆ, ಅರಳಿ ಕಟ್ಟೆಯಲ್ಲಿ, ದೇವಸ್ಥಾನದ ಕಡೆ ಹೋದ್ರೂನು ಇವನದ್ದೇ ಮಾತು. ಅವನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತೌನಂತೆ ಅವನು ನಿಂತೌನಂತೆ ಅನ್ನೋ ಮಾತುಗಳು.
ಹೌದು.. ಶಾಲೆಯ ಪಠ್ಯ ಪುಸ್ತಕದಲ್ಲಿ ನಾವು ಓದಿದ್ದಂತಹ ತಿರುಕನ ಕನಸು ಎನ್ನೋ ಒಂದು ಪದ್ಯ ಇತ್ತು ಅದು ನಿಮಗೆಲ್ಲಾ ಗೊತ್ತೇ ಇರೋ ವಿಚಾರ. ಆದರೆ, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಭಿಕ್ಷಕನೊಬ್ಬನು ಅಭ್ಯರ್ಥಿಯಾಗಿರೋದು ಅಲ್ಲ ಅಲ್ಲ ಅಭ್ಯರ್ಥಿಯಾಗಿ ಕಣಕ್ಕಿಳಿಸಿರೋದು ನಿಜವಾಗಿಯೂ ತಿರುಕನ ಕನಸು ಪದ್ಯ ನಿಜವಾದಂತಾಗಿದೆ.
ಹಳ್ಳಿ ಹಳ್ಳಿಗಳಲ್ಲಿ ಲೋಕಲ್ ವಾರ್ ಗ್ರಾಪಂ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಬೊಕ್ಕಹಳ್ಳಿ ಅನ್ನೋ ಗ್ರಾಮವೊಂದರಲ್ಲಿ ಊರಿನ ಯುವಕರು ಸೇರಿ ಅಂಗವಿಕಲ ಅಂಕಪ್ಪ ನಾಯಕ ಎಂಬ ಭಿಕ್ಷುಕನೊಬ್ಬನನ್ನು ಗ್ರಾಪಂ ಚುನಾವಣೆಗೆ ನಿಲ್ಲಿಸಿದ್ದಾರೆ. ನಂಜನಗೂಡು ತಾಲೂಕು ಬೊಕ್ಕಹಳ್ಳಿಯಲ್ಲಿ ಯಾರೂ ಇಲ್ಲದ, ಭಿಕ್ಷೆ ಬೇಡಿ, ಒಂದು ಹೊತ್ತಿನ ಊಟಕ್ಕೆ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವ ವ್ಯಕ್ತಿಯನ್ನು ಗ್ರಾಮಸ್ಥರೇ ಸೇರಿ ಚುನಾವಣೆಗೆ ನಿಲ್ಲಿಸಿದ್ದಾರೆ.
ಐದು ವರ್ಷದಿಂದ ಚರಂಡಿ ಸಮಸ್ಯೆ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಲಾಗದ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಂಕಪ್ಪನನ್ನು ಚುನಾವಣಾ ಕಣಕ್ಕೆ ಇಳಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈಗ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಸೇರಿ ಕಾರಿನಲ್ಲಿ ಕರೆತಂದು ನಾಮಪತ್ರ ಹಾಕಿಸಿದ್ದಾರೆ. ಗ್ರಾಮಸ್ಥರು ಈ ಆಂಕಪ್ಪನಿಗೆ ಮತ ಹಾಕಿ ಗ್ರಾಮ ಪಂಚಾಯತಿ ಸದಸ್ಯನ್ನಾಗಿ ಮಾಡ್ತಾರಾ ಕಾದು ನೋಡಬೇಕಿದೆ.