“ಲಿಂಬಿಕಾಯಿ” ಟೀಂಗೆ ‘ಹುಳಿ’ ಹಿಂಡಿದ “ಬೆಲ್ಲದ” ಟೀಂ ಮತದಾರ….

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರ ಬಣ ಬಹುಮತ ಗಳಿಸಿದ್ದು, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ ಬಣಕ್ಕೆ ತೀವ್ರ ಮುಖಭಂಗವಾಗಿದೆ.
ನಿನ್ನೆ ನಡೆದಿದ್ದ ಮತದಾನದ ಮತ ಎಣಿಕೆ ಅಂತ್ಯಗೊಂಡಿದ್ದು, ಬೆಲ್ಲದ ಅವರ ಬಣ ಬಹುಮತ ಗಳಿಸಿ, ಗೆಲುವಿನ ನಗೆ ಬೀರಿದೆ. ಶಂಕರ ಹಲಗತ್ತಿ, ಗುರು ಹಿರೇಮಠ ಸೇರಿ ಬಹುತೇಕರು ಗೆಲುವಿನ ದಡ ಸೇರಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ಈ ಬಾರಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚಂದ್ರಕಾಂತ ಬೆಲ್ಲದ ಅವರ ಬಣ ಸೋಲಿಸಲು ಹಲವು ರೀತಿಯ ಪ್ರಯತ್ನಗಳು ವಿಫಲವಾಗಿ ಕೊನೆಗೆ ಜಯವೇ ಬೆಲ್ಲದ ಬಣಕ್ಕೆ ದೊರಕಿದೆ.