ಇನ್ನೂ ಆರು ತಿಂಗಳು ಯಾವುದೇ ಚುನಾವಣೆ ಇಲ್ಲಾ: ಸಿಎಂ ಯಡಿಯೂರಪ್ಪ…!
1 min readಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ರಾಜ್ಯದಲ್ಲಿ ಆರು ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಸಿಎಂ ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿ ನಾಳೆ ರಾತ್ರಿಯಿಂದ ಕ್ರಮಗಳ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ಸಿಎಂ ಅವರು, ಚುನಾವಣೆಗಳನ್ನ ಆರು ತಿಂಗಳು ಮುಂದೂಡುತ್ತೇವ ಎಂದು ಹೇಳಿ, ನಂತರ ಶಿಫಾರಸ್ಸು ಮಾಡುವುದಾಗಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳು ಜೂನ್ ದಲ್ಲಿ ನಡೆಯುತ್ತವೆ ಎಂದು ಊಹಿಸಲಾಗಿತ್ತು. ಅದಕ್ಕೆ ಪೂರಕವಾಗಿಯೇ ಮಾಹಿತಿಯನ್ನ ಪಡೆದು, ಬಹಿರಂಗವನ್ನೂ ಮಾಡಲಾಗಿತ್ತು. ಅಷ್ಟೇ ಅಲ್ಲ, ಕ್ಷೇತ್ರ ವಿಂಗಡಣೆಗಳು ನಡೆದಿದ್ದವು.
ಇದೀಗ ಸಿಎಂ ಯಡಿಯೂರಪ್ಪ ಅವರ ಹೇಳಿಕೆಯಿಂದ ಚುನಾವಣೆಗಳ ಆಕಾಂಕ್ಷಿಗಳು ಆರು ತಿಂಗಳು ಅನಿವಾರ್ಯವಾಗಿ ಕಾಯಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.