ಇಂದು ಚುನಾವಣೆ-ಸದಸ್ಯೆ ಅಪಹರಣ ಯತ್ನ: ಸಿಕ್ಕವನನ್ನ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು…

ಇಂದು ನಡೆಯಬೇಕಾಗಿರುವ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
ಸಿನೀಮಯ ಶೈಲಿಯಲ್ಲಿ ಸದಸ್ಯೆಯ ಅಪಹರಣಕ್ಕೆ ಯತ್ನ
ಕಲಬುರಗಿ: ಸಾವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯೆಯ ಅಪಹರಣಕ್ಕೆ ಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಗ್ರಾ ಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ನಡೆದಿದೆ.
ಸಾವಳಗಿ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ ಎನ್ನುವವರು ಜಮೀನಿನಲ್ಲಿ ಕೆಲಸ ಮಾಡ್ತಿರುವಾಗ ಕ್ರೂಸರ್‌ನಲ್ಲಿ ಬಂದ 5/6 ಜನ ಅಪಹರಣಕಾರರು ಕೃತ್ಯವೆಸಗಲು ಯತ್ನಿಸಿದ್ದಾರೆ.
ವೀಡಿಯೋ…
ಕಾಂಗ್ರೆಸ್ ಬೆಂಬಲಿತ ಶಿವಕುಮಾರ್ ಮಲ್ಲು ಕಡಗಂಚಿ ಸೇರಿದಂತೆ ಇತರರು ಅಪಹರಣಕ್ಕೆ ಯತ್ನಿಸಿದ್ದು, ಮಾರಕಾಸ್ತ್ರ/ಬಡಿಗೆ ಹಿಡಿದುಕೊಂಡು ಸದಸ್ಯೆ ನಾಗಮ್ಮಳನ್ನ ಎತ್ತಾಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ನಾಗಮ್ಮ ಪುತ್ರ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಬರ್ತಿದ್ದಂಗೆ ಅಪಹರಣಕಾರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಸದಸ್ಯೆ ನಾಗಮ್ಮ ಮತ್ತು ಪುತ್ರ ಮಲ್ಲಿಕಾರ್ಜುನಿಗೆ ಗಾಯವಾಗಿದೆ. ಈ ವೇಳೆ ನಾಲ್ವರು ಎಸ್ಕೆಪ್ ಆಗಿದ್ದು, ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಓರ್ವ ಅಪಹರಣಕಾರ ಶಿವಕುಮಾರನನ್ನ ಮರಕ್ಕೆ ಕಟ್ಟಿ ಮನಬಂದಂತೆ ಗ್ರಾಮಸ್ಥರು ಥಳಿಸಿದ್ದಾರೆ.
ಗಾಯಾಳುಗಳನ್ನ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.