ರಾಮನಗರ ಬಡಾವಣೆ ಜನರಿಗೆ “ತತ್ತಿ” ವಿತರಿಸಿದ ಮಹೇಂದ್ರ ಕೌತಾಳ..!
1 min readಹುಬ್ಬಳ್ಳಿ: ರಾಮನಗರ ಬಡಾವಣೆಯ ಜನರಿಗೆ ಭಾರತೀಯ ಜನತಾ ಪಕ್ಷದ ಯುವ ಮುಖಂಡ ಮಹೇಂದ್ರ ಕೌತಾಳ ಅವರು, ಕೊರೋನಾದ ಸಮಯದಲ್ಲಿ ತತ್ತಿಯನ್ನ ವಿತರಣೆ ಮಾಡುವ ಮೂಲಕ ಜನರಿಗೆ ಸಹಾಯವಾದರು.
ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋವಿಂದ ಜೋಶಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಸಚಿವ ಜಗದೀಶ ಶೆಟ್ಟರ ಪುತ್ರ ಸಂಕಲ್ಪ ಶೆಟ್ಟರ, ಮಲ್ಲಿಕಾರ್ಜುನ ಸಾವುಕಾರ, ಬ್ರಾಂಡ್ ಡಿಸೋಜ್ ವಿತರಣೆ ಮಾಡಿದರು.
ಕೊರೋನಾ ಸಮಯದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಪೌಷ್ಠಿಕಾಂಶ ಹೆಚ್ಚಿಸುವ ಉದ್ದೇಶದಿಂದ ತತ್ತಿಯನ್ನ ಕೊಡಲು ಮಹೇಂದ್ರ ಕೌತಾಳ ಅವರು ಮುಂದಾಗಿದ್ದು ವಿಶೇಷವಾಗಿತ್ತು.
ರಾಮ ಯಾದಗಿರಿ, ಹನಮಂತಪ್ಪ ಚೆಲವಾದಿ, ಸಿಲನ್ ವಿಯರ್, ದೇವಿಕಾ ಚೆಲವಾದಿ, ಭುವನೇಶ್ವರಿ ಪಿಳೈ, ಪೃಥ್ವಿ ಮ್ಯಾಗೇರಿ, ಬಸವಂತ ಶಾಪೂರ, ರಾಜು ಆರೋಗ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.