ಧಾರವಾಡ: ಗುಡ್ಡದಲ್ಲಿರೋ “ಹೆಗ್ಗಣ್ಣಗಳನ್ನ” ಬಿಟ್ಟು ವರ್ಗಾವಣೆ ಹೈಡ್ರಾಮಾ… ಇದರಲ್ಲೊಬ್ಬ “ಮಾಸ್ಟರ್ ಫೀಸ್”…

ಸಭಾಪತಿಯವರ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ?
ಧಾರವಾಡ: ಕಾಂಗ್ರೆಸ್ ಸರ್ಕಾರದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಪತ್ರಕ್ಕೆ ಕವಡೆ ಕಾಸೀನ ಕಿಮ್ಮತ್ತೂ ಇಲ್ಲವೆ ಎಂಬ ಪ್ರಶ್ನೆ ಈಗ ಶಿಕ್ಷಣ ಇಲಾಖೆಯಲ್ಲಿ ತೀವ್ರವಾಗಿ ಪ್ರತಿಧ್ವನಿಸುತ್ತಿದೆ.
ಬಸವರಾಜ ಹೊರಟ್ಟಿಯವರು ಕಳೆದ ತಿಂಗಳು, ಏಳು ವರ್ಷಕ್ಕಿಂತ ಹೆಚ್ಚು ಅವಧಿಗೆ ಒಂದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಇತರ ಜಿಲ್ಲೆಗಳಿಗೆ ವರ್ಗಾಯಿಸಬೇಕೆಂದು ತೀವ್ರ ನೊಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಪತ್ರ ಬರೆದು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ.
ಸದ್ಯ ಬಿಡುಗಡೆಯಾದ ಧಾರವಾಡ ವಲಯ ಶಿಕ್ಷಣ ಇಲಾಖೆಯ ಏಳು ಪುಟಗಳ ವರ್ಗಾವಣೆ ಆದೇಶವನ್ನು ನೋಡಿದರೆ, 10 -15 ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಒಂದೇ ಒಂದು ಕೂದಲು ಕೊಂಕಿಸದ ಅಧಿಕಾರಿಗಳು ಅವರ ಸ್ಥಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಹಾಗೂ ಈ ಎಲ್ಲ ವರ್ಗಾವಣೆಗಳನ್ನ ಸಭಾಪತಿ ಬಸವರಾಜ ಹೊರಟ್ಟಿಯವರ ಸೂಚಿಸಿದ ಹಿನ್ನೆಲೆ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವರ ಕಚೇರಿಯ ಮೂಲಗಳು ಹೇಳುತ್ತಿವೆ.
ಹಾಗೆ ಇನ್ನೊಂದು ಭಯಂಕರ ವಿಸ್ಮಯ ಸಂಗತಿ ಎಂದರೆ, ಫೆಬ್ರವರಿ ತಿಂಗಳಲ್ಲಿ ಹಳಿಯಾಳ ಬಿಇಒ ಕಚೇರಿಗೆ ಅಧೀಕ್ಷಕನಾಗಿ ಬಡ್ತಿ ಪಡೆದ ವಿ.ಎಂ. ನಂದಿಹಳ್ಳಿ ಎಂಬುವರು ಬರೀ ನಾಲ್ಕೇ ತಿಂಗಳಲ್ಲಿ ಮತ್ತೇ ಧಾರವಾಡ ಅಪರ ಆಯುಕ್ತರ ಕಚೇರಿಗೆ ವರ್ಗಾಯಿಸಲಾಗಿದೆ.
ಸದ್ಯ ಹೊರಡಿಸಿರುವ ಈ ಎಲ್ಲ ವರ್ಗಾವಣೆ ದಂಧೆ ಹಿಂದೆ ಶಾ-Moneyಯೇ ರಿಂಗ್ ಮಾಸ್ಟರ್ ಎನ್ನಲಾಗುತ್ತಿದ್ದು, ಪಟ್ಟಿ ತಯಾರಿಸುವಲ್ಲಿ ನಂದಿಹಳ್ಳಿ ಹಗಲಿರುಳು ಶ್ರಮಿಸಿದ್ದಾನೆ ಎಂಬ ಆರೋಪ ವಿದ್ದು, ಇಗಲಾದರೂ ಸಭಾಪತಿಯವರು ಈ ಅನಿಯಮಿತ ವರ್ಗಾವಣೆ ಕ್ರಮಗಳ ಕುರಿತು ಸೂಕ್ತ ಕಾನೂನು ತನಿಖೆಗೆ ಮುಂದಾಗಿ ತಾವೇ ಸೂಚಿಸಿರುವ ಹಾಗೆ ಏಳು ವರ್ಷದಿಂದ ಒಂದೇ ಕಛೇರಿಯಲ್ಲಿ ಕಾರ್ಯನಿರ್ವಹಿಸುವವರನ್ನು ವರ್ಗಾಯಿಸುವರೆ ಎಂಬುದನ್ನು ಕಾದು ನೋಡಬೇಕಾಗಿದೆ.
###