ಧಾರವಾಡ- “31” ವರ್ಷದ ಸರ್ವಿಸ್ಸ್‌ನಲ್ಲಿ “30” ವರ್ಷ ಧಾರವಾಡ ನಗರದಲ್ಲೇ ‘ಶಾ Money’ ಠಿಕಾಣಿ…

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಕೆಲ ನೌಕರರ ಹಿತಾಸಕ್ತಿ ಧೋರಣೆಯಿಂದ ಬೇಸತ್ತು ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರಕ್ಕೆ ಇನ್ನೇನು ಮುಖ್ಯಮಂತ್ರಿಯವರ ಅನುಮೋದನೆಯಷ್ಟೇ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಏಳು ವರ್ಷಕ್ಕಿಂತ ಹೆಚ್ಚಿಗೆ ಒಂದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಇತರ ಜಿಲ್ಲೆಗಳಿಗೆ ಕೂಡಲೇ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ನೌಕರರಂತೂ ತಾವು ಕಾರ್ಯನಿರ್ವಹಿಸುವ ಕಚೇರಿಗಳನ್ನು ಬಿಡಲೊಲ್ಲರು ಎನ್ನಲಾಗುತ್ತಿದ್ದು, ಕೆಲವರಂತೂ ಬೆಂಗಳೂರಿಗೂ ಹೋಗಿ ಅವರಿವರೆನ್ನದೇ ತಮಗೆ ಸಿಕ್ಕ ಎಲ್ಲರ ಕೈ-ಕಾಲು ಹಿಡಿದು, ಬಿದ್ದು ಗೋಗರೆದು ತಾವಿರುವ ಕಚೇರಿಯಲ್ಲೇ ಮುಂದುವರೆಯಲು ಶತಾಯು-ಗತಾಯು ಬೇಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೆಲವರಂತೂ ಧಾರವಾಡ ಒಂದೇ ಊರಿನಲ್ಲಿ 30-35 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು, ಅವರೂ ಕೂಡ ಧಾರವಾಡ ಬಿಡಲು ಸುತಾರಾಂ ಸಿದ್ಧಿರಿಲ್ಲ ಎನ್ನಲಾಗುತ್ತಿದೆ.

ಏತನ್ಮಧ್ಯೆ, ಹೆಸರು ಹೇಳಲು ಇಚ್ಚಿಸದ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ಮಾತನಾಡಿ ಇಲ್ಲಿಯವರಗೆ ಶಾ-money ಯವರು ಒಟ್ಟು 31-ವರ್ಷ ಸೇವೆ ಸಲ್ಲಿಸಿದ್ದು, ಧಾರವಾಡ ಒಂದರಲ್ಲೇ ಅಖಂಡ 30 ವರ್ಷ ಸೇವೆ ಸಲ್ಲಿಸಿದ್ದು, ಸದ್ಯ ಅಪರ ಆಯುಕ್ತಾಲಯವನ್ನೇ ಮಕಾಡೆ ಮಲಗಿಸಿದ್ದಾರೆ ಎಂದು ಹೇಳಿದ ಅವರು ‘ತನಗಾಗದ ಮತ್ತು ಪ್ರಾಮಾಣಿಕ ಹಿರಿಯ ಅಧಿಕಾರಿಗಳನ್ನು ದೂರದ ಕಲಬುರ್ಗಿಗೆ ವರ್ಗಾಯಿಸುವುದರಲ್ಲಿ ಶಾ-money ನಿಸ್ಸೀಮ’ ಎನ್ನುವ ಅಧಿಕಾರಿಗಳು ಸದ್ಯ ಕಲಬುರ್ಗಿಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವತ್ತಿರುವ ಹಿರಿಯ ಮಹಿಳಾ ಅಧಿಕಾರಿಯವರನ್ನು ಯಾವುದೇ ತಪ್ಪು ಮಾಡದೆ ಇದ್ದಾಗಲೂ ಕೂಡಾ ಅವರನ್ನು ಧಾರವಾಡದಿಂದ ಕಲಬುರ್ಗಿಗೆ ವರ್ಗಾಯಿಸುವಲ್ಲಿ ಇದೆ ಶಾ-money ಕೈಚಳಕವೇ ಕಾರಣ ಎಂದು ಹೇಳಿದರು.
ಅಪರ ಆಯುಕ್ತಾಲಯಕ್ಕೆ ಹಾಜರಾದ ಈಶ್ವರ ಉಳ್ಳಾಗಡ್ಡಿಯವರು ಅಪರ ಆಯುಕ್ತಾಯಲಯದಲ್ಲಿ ನಡೆಯುತ್ತಿರುವ ಇಂತಹ ಬಾರಾ ಭಾನಗಡಿಗಳನ್ನು ತಪ್ಪಿಸಿ, ಶಾ-money ಯವರ ತುಘಲಕ್ ದರ್ಬಾರಿಗೆ ತೀಲಾಂಜಲಿ ಹಾಕುವರೇ ಎಂದು ಶಿಕ್ಷಣಾಸಕ್ತರು ಕಾದು ನೋಡುತ್ತಿದ್ದಾರೆ.