ಸಚಿವ ಸುರೇಶಕುಮಾರ: ಶಿಕ್ಷಕರ ದಿನಾಚರಣೆ ಹೇಗೆ ಆಚರಿಸಿದ್ರು ಗೊತ್ತಾ..! ಅವರ ಮೊದಲ ಗುರುವನ್ನ ನೋಡಬೇಕಾ..?

ಬೆಂಗಳೂರು: ಇಂದು ಡಾ.ಸರ್ವಪಲ್ಲಿ ರಾಧಾಕೃಷ್ಣನರ ಜನ್ಮ ದಿನಾಚರಣೆ. ಅದೇ ದಿನವನ್ನ ಶಿಕ್ಷಕರ ದಿನಾಚರಣೆಯಂದು ಆಚರಣೆ ಮಾಡುತ್ತ ನಮಗೆ ಕಲಿಸಿದ ಗುರುವಿಗೆ ನಮನ ಸಲ್ಲಿಸುತ್ತ ಬಂದಿರುವುದು ವಾಡಿಕೆ. ಆದ್ರೆ, ಶಿಕ್ಷಣ ಸಚಿವ ಸುರೇಶಕುಮಾರ ಇಂದು ಕೂಡಾ ತಮ್ಮತನವನ್ನ ಎಲ್ಲರೂ ಮೆಚ್ಚುವಂತೆ ತೋರಿಸಿಕೊಂಡರು.
ಗುರುವಿಗೆ ಗುಲಾಮನಾಗುವ ತನಕ ಸಿಗುವದೇನ್ ಮುಕ್ತಿ ಎಂಬ ಪದಕ್ಕೆ ಪೂರಕವೆಂಬಂತೆ ಇಂದು ಶಿಕ್ಷಕರ ದಿನಾಚರಣೆಯನ್ನ ವಿಭಿನ್ನವಾಗಿ ಆಚರಿಸಿದರು. ಬೆಳಿಗ್ಗೆ ಸರಕಾರದ ಕೆಲಸಕ್ಕೆ ಹೋಗುವ ಮುನ್ನ ಸಚಿವರು ತಮ್ಮ ಮೊದಲ ಗುರುವಿಗೆ ಕಾಲು ಮುಟ್ಟಿ ನಮಸ್ಕರಿಸಿದರು.
ಆ ಗುರು ಬೇರೆ ಯಾರೂ ಅಲ್ಲ, ಸುರೇಶಕುಮಾರ ತಾಯಿ. ಅವರ ಕಾಲು ಮುಟ್ಟಿರುವ ಭಾವಚಿತ್ರವನ್ನ ಟ್ವೀಟ್ ಮಾಡಿರುವ ಸಚಿವರು..
ಮನೆಯೇ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ ಜನರು ಧನ್ಯರು.. ಎಂದು ಬರೆದುಕೊಂಡಿದ್ದಾರೆ.
ಇದೇ ಕಾರಣಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ.