ಶಿಕ್ಷಣ ಇಲಾಖೆಯಲ್ಲಿ “ಮಾಟ ಮಂತ್ರ”ಗಳ ಕೋಲಾಹಲ- ಅಧಿಕಾರ ವಹಿಕೊಳ್ಳುವ ಮುಂಚೆಯೇ ಆಯುಕ್ತರ ಹಾದಿ ತಪ್ಪಿಸುವ ಷಡ್ಯಂತ್ರ..!!!

ಧಾರವಾಡ: ಸಭಾಪತಿ ಬಸವರಾಜ ಹೊರಟ್ಟಿಯವರ ಪತ್ರದ ಹಿನ್ನಲೆ ಶಿಕ್ಷಣ ಇಲಾಖೆಯ ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತಲೂ ಹೆಚ್ಚಿಗೆ ಸೇವೆ ಸಲ್ಲಿಸುತ್ತಿರುವ ನೌಕರರ ವರ್ಗಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇನ್ನೇನು ಮುಖ್ಯಮಂತ್ರಿಯವರ ಅಂಕಿತ ಮಾತ್ರ ಬಾಕಿ ಎನ್ನಲಾಗಿದೆ.
ಧಾರವಾಡ ಅಪರ ಆಯುಕ್ತಾಲಯಕ್ಕೆ ಹಾಜರಾದ ಈಶ್ವರ ಉಳ್ಳಾಗಡ್ಡಿಯವರಿಗೆ ಕಚೇರಿಗೆ ಹಾಜರಾಗುವ ಪೂರ್ವದಲ್ಲಿ ದಾರಿತಪ್ಪಿಸುವ ಕುತಂತ್ರ ಯೋಜನೆಯೊಂದು ಕಚೇರಿಯ ಕೆಲ ಸಿಬ್ಬಂದಿಯರು ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರದಿಂದ ವರ್ಗಾವಣೆ ಆದೇಶ ಪಡೆದ ಈಶ್ವರ ಉಳ್ಳಾಗಡ್ಡಿಯವರು ಗುರವಾರದಂದು ಹಾಜರಾಗುವ ಪೂರ್ವದಲ್ಲಿ ನಿಕಟ ಪೂರ್ವ ಅಪರ ಆಯುಕ್ತರಿಗೆ ಔಪಚಾರಿಕವಾಗಿ ದೂರವಾಣಿ ಮೂಲಕ ಹಾಜರಾಗುವ ವಿಷಯ ತಿಳಿಸಿದ್ದಾರೆ. ಆಗ ಅವರಿಗೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು ಎಂಬ ಪುಕ್ಕಟೆ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಅದನ್ನು ಅವರು ಸಾರಾಸಗಟವಾಗಿ ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಸಿಟಿಸಿಯನ್ನು (ಪ್ರಭಾರ ವರ್ಗಾವಣೆ ಪ್ರಮಾಣಪತ್ರ) ನೇರವಾಗಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇದೆಲ್ಲದ ಕುತಂತ್ರ ಹಿಂದೆ ಶಾ-moneyಯ ಕೈವಾಡವಿದೆಯೆಂಬ ಕಚೇರಿಯೊಳಗಿನ ಗುಸು ಗುಸು ಚರ್ಚೆ ಸದ್ಯ ಗುಟ್ಟಾಗಿ ಉಳಿದಿಲ್ಲ ಎನ್ನಲಾಗುತ್ತಿದೆ.
ಅಪರ ಆಯುಕ್ತರು ಹಾಜರಾಗುವ ದಿನ ಇಷ್ಟೇಲ್ಲಾ ಬಾರಾ ಭಾನಗಡಿ ಮಾಡಿದ ಸಿಬ್ಬಂದಿಯೊಬ್ಬರು ಮರುದಿನ ಅದಾವುದೊ ಲಿಂಬೆಹಣ್ಣಿನೊಂದಿಗೆ ಕಚೇರಿಗೆ ಆಗಮಿಸಿ, ಮದುವಣಗಿತ್ತಿಯ ಹಾಗೆ ಕಚೇರಿಯ ತುಂಬೆಲ್ಲಾ ಓಡಾಡಿ ಆಯುಕ್ತರ ಗಮನ ಸೆಳೆಯಲು ಹರಸಾಹಸಪಟ್ಟರು ಎನ್ನಲಾಗುತ್ತಿದ್ದು, ಇನ್ನೇನು ಬರುವ ಅಮವಾಸ್ಯೆಯಂದು ವೃತ್ತಿಪರ ಜ್ಯೋತಿಷ್ಯ ಯೊಬ್ಬರಿಂದ ಲಿಂಬೆಹಣ್ಣನೊಂದು ಕಛೆರಿಯಲ್ಲಿ ಇಡಲು ಎಲ್ಲ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
“ಅಮಾವಾಸ್ಯೆಯ ಲಿಂಬೆಹಣ್ಣು ಪರಿಣಾಮಕಾರಿಯಾಗದಿದ್ದರೆ, ಅವರು ನೇರವಾಗಿ ಕೇರಳಕ್ಕೆ ಹೋಗಿ ಮಾಯಾವಿ, ಮಾಟ ಮತ್ತು ಮಂತ್ರ ಮಾಡಿಸಿ ಇಲಾಖೆಯಲ್ಲೇ ಗೊಂಬೆಯೊಂದಕ್ಕೆ ಸೂಜಿ ಚುಚ್ಚುವ ಎಲ್ಲ ಪ್ರಯತ್ನಗಳನ್ನು ನಡೆಸಲಿದ್ದಾರೆ,” ಎಂದು ಕಳೆದ ದಶಕದಿಂದ ಅವರ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಸಹೋದ್ಯೋಗಿಯೊಬ್ಬರು ಕರ್ನಾಟಕವಾಯ್ಸ್.ಕಾಂಗೆ ತಿಳಿಸಿದ್ದಾರೆ.