ತನ್ನ ಬಣ್ಣ ಬಯಲಾಗುವ ಮುನ್ನವೇ “33ವರ್ಗಾವಣೆ”ಗೆ ಅಂಕಿತ ಹಾಕಿಸಿದ್ರಾ ‘ಶಾ-Money’…

ಧಾರವಾಡ: ಧಾರವಾಡ ವಲಯದ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಗೊಂಡ ’33’ ನೌಕರರ ವರ್ಗಾವಣೆ ಆದೇಶವನ್ನು ಕಂತ್ರಿ ಬುದ್ಧಿಯ ಶಾ-money ಹಿರಿಯ ಅಧಿಕಾರಿಗಳ ದಾರಿ ತಪ್ಪಿಸಿ ಕೊನೆಗೂ ಜಾರಿಗೊಳಿಸುವಲ್ಲಿ ಸಫಲತೆ ಕಂಡುಕೊಂಡಿದ್ದಾಳೆ ಎಂಬ ಆರೋಪ ಕೇಳಿಬರುತ್ತಿವೆ.
ಸದ್ಯ, ವರ್ಗಾವಣೆಗೊಂಡ ಕೆಲ ನೌಕರರು ಅಪರ ಆಯುಕ್ತರಿಗೆ ವೈಯಕ್ತಿಕವಾಗಿ ಭೇಟಿ ನೀಡಿ, “ನಮಗಿಂತ ಹೆಚ್ಚು ಸೇವೆ ಸಲ್ಲಿಸುತ್ತಿರುವ ಕೆಲ ನೌಕರರು ಅಪರ ಆಯುಕ್ತಾಲಯ ಕಚೇರಿಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ವರ್ಗಾವಣೆಯಾಗಿಲ್ಲ. ಆದರೆ, ಅವರಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ನೌಕರರು ವರ್ಗಾವಣೆಯಾಗಿದ್ದಾರೆ, ಈ ಹಿನ್ನೆಲೆಯಲ್ಲಿ ವರ್ಗಾವಣೆ ಕ್ರಮವನ್ನು ಮರುಪರಿಶೀಲಿಸಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು” ಎಂದು ಮನವಿ ಮಾಡಿದ್ದಾರೆ. ಕಾರಣ ಅನ್ಯಾಯವಾದ ಕೆಲ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಅಪರ ಆಯುಕ್ತರು ಕೂಡಾ ತೀರ್ಮಾನಿಸಿದ್ದರೆಂದು ತಿಳಿದುಬಂದಿದೆ.
ಏತನ್ಮಧ್ಯೆ, ಕಂತ್ರಿ ಬುದ್ದಿಯ ಶಾ-money “ಸರ್, ನಾವು ಸರ್ಕಾರದ ವರ್ಗಾವಣೆ ಆದೇಶ ಪಾಲಿಸಲೇಬೇಕು. ಇಲ್ಲದಿದ್ದರೆ ವರ್ಗಾವಣೆಗೊಂಡ ನೌಕರರಿಂದ ಇಲಾಖೆಗೆ ಸಮಸ್ಯೆ ಉಂಟಾಗಬಹುದು” ಎಂದು ಆಯುಕ್ತರನ್ನು ದಾರಿ ತಪ್ಪಿಸಿ, ತನ್ನ ಹಠ ಸಾಧಿಸಿದ್ದಾಳೆ. ಅಷ್ಟೇ ಅಲ್ಲ, ತಾನೂ ಹತ್ತು ವರ್ಷದಿಂದ ಇರುವುದನ್ನ ಮರೆಮಾಚಲು ಈ ಡ್ರಾಮಾ ನಡೆದಿದೆ ಎಂದು ಆಯುಕ್ತಾಲಯದ ಕೆಲ ನೌಕರರು ‘ಕೆವಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.