Posts Slider

Karnataka Voice

Latest Kannada News

ಸರಕಾರಿ ಶಾಲೆ ಶಿಕ್ಷಕರು- ಖಾಸಗಿ ಶಾಲೆ ಶಿಕ್ಷಕರ ನಡುವೆ ಧಗಧಗ ಹೊತ್ತಿದ ಬೆಂಕಿಗೆ ಕಾರಣವಾದ ಆಡೀಯೋ…!

Spread the love

ಬೆಂಗಳೂರು: ಸರಕಾರಿ ಶಾಲೆ ಶಿಕ್ಷಕರು ಹಾಗೂ ಖಾಸಗಿ ಶಾಲಾ ಶಿಕ್ಷಕರ ನಡುವೆ ಶೀತಲ ಸಮರ ಆರಂಭವಾಗಿದ್ದು, ಅದಕ್ಕೆ ಕಾರಣವಾಗಿದ್ದು, ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಮಾತನಾಡಿರುವ ಆಡೀಯೋ..

ಹೌದು.. ಖಾಸಗಿ ಶಾಲೆಯ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಒಂದು ದಿನದ ಸಂಬಳವನ್ನ ಸರಕಾರಿ ಶಾಲೆಯ ಶಿಕ್ಷಕರು ನೀಡಬೇಕೆಂದು ಕೋರಿದ ಘಟನೆಗೆ ಸರಕಾರಿ ಶಾಲೆಯ ಶಿಕ್ಷಕರು ನಿರಾಕರಿಸಿದ್ದು, ಅದೇ ಕಾರಣದಿಂದ ಖಾಸಗಿ ಶಾಲೆಯ ಶಿಕ್ಷಕರು ಅಸಭ್ಯವಾಗಿರುವ ಆಡೀಯೋಂದನ್ನ ಮಾಡಿ ಬಿಡುಗಡೆ ಮಾಡಿದ್ದಾರೆ.

ಆಡೀಯೋ ಇಲ್ಲಿದೆ ಕೇಳಿ..

ಆಡೀಯೋಗೆ ಬಂದ ಉತ್ತರಗಳು ಇಲ್ಲಿವೆ ನೋಡಿ…

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಒಂದು ಆಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘದ ಬಗ್ಗೆ ಮತ್ತು ಇಲಾಖೆಯ  ಅಧಿಕಾರಿಗಳ ಅತ್ಯಂತ  ಬಗ್ಗೆ ಹಗುರವಾಗಿ , ಕೀಳಾಗಿ ಮತ್ತು ಅವಹೇಳಕಾರಿಯಾಗಿ ಮಾತನಾಡಿರುವುದನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಉಗ್ರವಾಗಿ ಖಂಡಿಸುತ್ತದೆ .ಇದು ಅವರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು  ೫ ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿದ್ದು  ರಾಜ್ಯದಲ್ಲಿ ಶಿಕ್ಷಣದ ಸಾರ್ವತ್ರೀಕರಣಕ್ಕೆ ಹಗಲು ರಾತ್ರಿ ಶ್ರಮಿಸುತ್ತಿದೆ. ನಮ್ಮ ಸಂಘ ಮತ್ತು ನಮ್ಮ ನಿಸ್ವಾರ್ಥ ಸೇವೆಯ ಬಗ್ಗೆ ಡಿ . ಶಶಿಕುಮಾರ್ ರವರಿಂದ ಪ್ರಶಂಶೆ ಪತ್ರದ ಅವಶ್ಯಕತೆಯಿಲ್ಲ . ಸಂಘವು ರಾಜ್ಯದಲ್ಲಿ ಪ್ರತಿಬಾರಿ ನೈಸರ್ಗಿಕ, ಸಾಂಕ್ರಾಮಿಕ ಅಥವಾ ಬೇರೆ ಯಾವುದೇ ಬಗೆಯ ವಿಕೋಪಗಳು ಬಂದೊದಗಿದ ಸಂದರ್ಭದಲ್ಲಿ ಸಾಮಾಜಿಕ  ಬದ್ಧತೆ ಹಾಗೂ ಕಾಳಜಿಯಿಂದ ಮತ್ತು ಅಷ್ಟೇ ಪ್ರಾಮಾಣಿಕತೆಯಿಂದ ಉದಾರವಾಗಿ  ಶಿಕ್ಷಕರ ವೇತನವನ್ನು ಈ ನಾಡಿಗೆ ನೀಡಿ ತನ್ನ ಔದಾರ್ಯವನ್ನು ಮೆರೆದಿದೆ. ಹಾಗೇಯೆ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ  ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕೂಡಾ ಸಂಘವು ಮಾನವೀಯ ನೆಲೆಗಟ್ಟಿನಲ್ಲಿ ಸದಾ ಚಿಂತನೆ ಮಾಡುತ್ತಿದೆ,ಖಾಸಗಿ ಶಾಲಾ ಶಿಕ್ಷಕರಂತೆಯೇ ರಾಜ್ಯದಲ್ಲಿ ನೊಂದ ಜನತೆಯ ಜೊತೆ ಸಂಘವು ಇದೆ ಎಂಬುದು ನಾಡಿಗೆ ಗೊತ್ತಿದೆ.

ಸಂಘಟನೆಯ ಆಂತರಿಕ ಚರ್ಚೆಯಾಗಿ ನಮ್ಮ ನಿರ್ಣಯ ಸರಕಾರಕ್ಕೆ ಸಲ್ಲಿಕೆಯಾಗುವ ಮೊದಲು  ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಚರ್ಚೆಯ ಒಂದು ಅಂಶವನ್ನು ಗಮನಿಸಿ ಇಲ್ಲ ಸಲ್ಲದ ಹೇಳಿಕೆ ಕೊಡುವುದು ಜವಬ್ದಾರಿಯುತ ವ್ಯಕ್ತಿಗಳಿಗೆ ಶೋಭೆ ತರುವಂತದ್ದಲ್ಲ

 ಪೋಷಕರ ರಕ್ತ ಹೀರಿ ಲಾಭಗಳಿಸಲು ಶಿಕ್ಷಣದ ವ್ಯಾಪಾರೀ  ಸಂಸ್ಥೆಗಳನ್ನು ತೆರೆದಿರುವ ಡಿ . ಶಶಿಕುಮಾರ್ ರವರಿಂದ ನಾವು ನೈತಿಕತೆ ಪ್ರಾಮಾಣಿಕತೆ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಕೋವಿಡ್ ಪೂರ್ವದಲ್ಲಿ  ಪಾಲಕರಿಂದ ಕೋಟ್ಯಾಂತರ ಸುಲಿಯುತ್ತಿದ್ದ  ಇವರು ತಮ್ಮ ಶಿಕ್ಷಕರಿಗೆ ಶಿಕ್ಷಣಹಕ್ಕು  ಕಾಯಿದೆ ಪ್ರಕರಣ ೨೩ ರ ಅನ್ವಯ ಎಷ್ಟು ಸಂಬಳ ಕೊಟ್ಟರುತ್ತಾರೆ ಎಂದು  ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ತಿಳಿದಿದೆ,ಅಮಾಯಕ ಶಿಕ್ಷಕರನ್ನು ಮುಂದಿಟ್ಟುಕೊಂಡು ನಾಟಕ ಮಾಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು  ಸರಕಾರೀ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಅತ್ಯಂತ ಕೆಳಸ್ತರದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮೂಲಕ ಮಕ್ಕಳ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿಯಲು ಅವಿರತವಾಗಿ ಶ್ರಮಿಸುತ್ತಿದೆ.

ಸೇವೆಯಾಗಬೇಕಿದ್ದ ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿ ಮಕ್ಕಳನ್ನು ಮತ್ತು ಪಾಲಕರನ್ನು ಮತ್ತು ಶಿಕ್ಷಕರನ್ನು ವ್ಯವಸ್ಥಿತವಾಗಿ ವಂಚಿಸಿ ಲೂಟಿ ಮಾಡುತ್ತಿರುವ ಶಶಿಕುಮಾರ್ ನಂತಹವರು ಹಗಲು ದರೋಡೆ ನಡೆಸುವ  ಬಣ್ಣ ಬಯಲಾಗಿದ್ದು ಡಿ . ಶಶಿಕುಮಾರ್ ರವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆಯಿದೆ .

ನಮ್ಮ  ಶಿಕ್ಷಕ ಸಂಘದ ಸದಸ್ಯರು ಮತ್ತು  ಇಲಾಖೆಯ  ಅಧಿಕಾರಿಗಳ  ಬಗ್ಗೆ ಅತ್ಯಂತ ಹಗುರವಾಗಿ , ಮಾತನಾಡಿರುವುದು ಖಂಡನೀಯ  .

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ( ರಿ )ಬೆಂಗಳೂರು

ಪೋಷಕರಿಂದ ಸಾಕಷ್ಟು ಹಣ ಲೂಟಿ ಮಾಡಿ, ಶಿಕ್ಷಕರಿಗೆ ಕಡಿಮೆ ಸಂಬಳ ಕೊಟ್ಟು, ಬಂಗಲೆ ಕಾರು ಬಂಗಾರ ಎಲ್ಲಾ ಕೊಂಡುಕೊಂಡ ಶಶಿ, ಈಗ ಅದನ್ನು ಮಾರಿ ಶಿಕ್ಷಕರಿಗೆ ಸಂಬಳ ಕೊಡಲಿ.ನಮಗೆ ಆ ಶಿಕ್ಷಕರ ಬಗ್ಗೆ ವಿಶೇಷ ಕಾಳಜಿ ಇದೆ.

ಅವತ್ತು ಬೇಕಾಬಿಟ್ಟಿ BUILDING FEE, UNIFORM FEE,TOUR FEE ಹೀಗೇ ಹತ್ತು ಹಲವು ಫೀ ಅಂತ ಪೋಷಕರಿಂದ ದೋಚಿ ಮಜಾ ಉಡಾಯಿಸಿ ಈಗ ನಮ್ಮ ಸಂಘದ ಬಗ್ಗೆ ಮಾತನಾಡಲು ನಿನಗೇನು ಹಕ್ಕಿದೆ ಶಶಿಕುಮಾರ್,ನಾಲಿಗೆ ಹಿಡಿತದಲ್ಲಿ ಇರಲಿ.

ನಮ್ಮ ಸರ್ಕಾರಿ ಶಾಲೆಗಳ ಪ್ರತಿಸ್ಪರ್ಧಿ ಗಳು ಖಾಸಗಿ ಶಾಲೆಗಳು.ಖಾಸಗಿ ಶಾಲೆಗಳಿಂದ  ಎಷ್ಟೋ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ.

ಅಷ್ಟಕ್ಕೂ ಖಾಸಗಿ ಶಾಲೆಯ ಶಿಕ್ಷಕರ ವೇತನ ಹಿಡಿದು ಸಭೆ ಸಮಾರಂಭಗಳಿಗೆ ಕೊಟ್ಟಿಲ್ಲ.ಅವರ ಕೈಯಿಂದ ಕೊಟ್ಟಿಲ್ಲ.ಹಾವು ಹೊಡೆದು ಹದ್ದಿಗೆ ಹಾಕಿರಬಹುದು(ಪೋಷಕ ಹಣ)

ನಮ್ಮ ಶಿಕ್ಷಕರಿಗೆ ಅವರಿಂದ ಯಾವುದೇ ಹಣಕಾಸಿನ ಸಹಾಯ ಪಡೆದಿಲ್ಲ.

ಶಿಕ್ಷಕರು ಒಂದು ದಿನದ ವೇತನ ಅವರಿಗೇಕೆ ಕೊಡಬೇಕು?

ಪೋಷಕ ರಿಂದ 70% ,fee ಪಡೆದಿದ್ದಾರೆ.ಆ ಹಣದಲ್ಲಿ ವೇತನ ನೀಡಲಿ.

ಖಾಸಗಿ ಶಾಲಾ ಶಿಕ್ಷಕರ ಸಂಕಷ್ಟದ ಬಗ್ಗೆ ನಮಗೂ ಕನಿಕರ ಇದೆ.

 ದುಡಿಸಿಕೊಂಡವರು ಖಾಸಗಿ ಶಾಲೆಗಳ ಮೇನೇಜ್ ಮೆಂಟ್ ರವರು ಈ ಸಮಯದಲ್ಲಿ ದುರಾಸೆ ಬಿಟ್ಟು ಅವರ ಆರ್ಥಿಕ ಸಂಕಷ್ಟಕ್ಕೆ ಸಹಾಯ ಮಾಡಲಿ.

ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಶಿವಕುಮಾರ್ ಮಾತನಾಡಿರುವುದು ಖಂಡನೀಯ.

    ರಾಮಾಂಜನೇಯ

        ಜಿಲ್ಲಾ ಅಧ್ಯಕ್ಷರು

ಪ,ಜಾತಿ/ಪ,ವರ್ಗದ ಶಿಕ್ಷಕರ ಸಂಘ ಬೆಂಗಳೂರು ಉತ್ತರ ಜಿಲ್ಲೆ

ಇಂದು ನಡೆದ KSPSTA ರಾಜ್ಯ ಕಾರ್ಯಕಾರಿ ಸಮಿತಿಯ “ವರ್ಚುವಲ್ ಸಭೆ” ಯ ಮುಖ್ಯಾಂಶಗಳು.

ಚರ್ಚಿತ ವಿಷಯ 1️⃣: ಖಾಸಗಿ ಶಾಲೆಯ ಶಿಕ್ಷಕರಿಗೆ ಒಂದು ದಿನದ ವೇತನವನ್ನು ಸರ್ಕಾರಿ ಶಾಲಾ ಶಿಕ್ಷಕರು ನೀಡುವ ಬಗ್ಗೆ.

   ಅಭಿಪ್ರಾಯ: ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮತ್ತು ರಾಜ್ಯದ ಎಲ್ಲಾ ಪದಾಧಿಕಾರಿಗಳು ಈ ಪ್ರಸ್ತಾವನೆಗೆ ನೇರವಾಗಿ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಸಹ, ಖಾಸಗಿ ಶಾಲೆಯ ಶಿಕ್ಷಕರ ಸಹಾಯಕ್ಕಾಗಿ ಒಂದು ದಿನದ ವೇತನವನ್ನು ಮಾಡಲಿಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ನಿಲುವು ತೆಗೆದುಕೊಳ್ಳಲಾಯಿತು

ಒಂದು ವೇಳೆ ವೇತನವನ್ನು ನೀಡುವುದಾದರೆ, ನಿಲಂಬನೆ ಮಾಡಿರುವ ತುಟ್ಟಿ ಭತ್ಯೆಯನ್ನು ನೀಡಿದರೆ, ಒಂದು ದಿನದ ವೇತನವನ್ನು ರಾಜ್ಯದ ಬಡಜನತೆಗೆ,ಕೋವಿಡ್ ನಿಯಂತ್ರಣಕ್ಕೆ, ಅಥವಾ ಕೋವಿಡ್ ಬಾದಿತ, ನಿಧನ ಹೊಂದಿದ ಶಿಕ್ಷಕರಿಗೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಚರ್ಚಿತ ವಿಷಯ-2️⃣: ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ.

ಅಭಿಪ್ರಾಯ:

✅ ಶಿಕ್ಷಕರನ್ನು “ಫ್ರಂಟ್ ಲೈನ್ ಕೊರೋನಾ ವಾರಿಯರ್ಸ್”, ಎಂದು ಪರಿಗಣಿಸಿ, ವಿಮಾ ಸೌಲಭ್ಯದೊಂದಿಗೆ ಆದೇಶ ಹೊರಡಿಸಬೇಕು.

✅ ಕೊರೋನಾ ವಾರಿಯರ್ಸ್ ಸಹಿತವಾಗಿ ಕೋವಿಡ್ ನಿಂದ ಮೃತಪಟ್ಟ ಎಲ್ಲಾ ಶಿಕ್ಷಕರಿಗೂ ಪರಿಹಾರ ಒದಗಿಸಲು ಪ್ರಯತ್ನಿಸಬೇಕು

✅ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುವಾಗ, 50+ ವಯಸ್ಸಿನ, ಗಂಭೀರ ಖಾಯಿಲೆ ಉಳ್ಳ, ಗರ್ಭಿಣಿ/ ಚಿಕ್ಕ ಮಕ್ಕಳುಳ್ಳ ಶಿಕ್ಷಕಿಯರನ್ನು ಹೊರತು ಪಡಿಸಿ ನಿಯೋಜನೆ ಮಾಡಬೇಕು

✅ ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಲ್ಪಟ್ಟ ಶಿಕ್ಷಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು

✅ ವಾಸವಿರುವ ಸ್ಥಳದಲ್ಲಿಯೇ ನಿಯೋಜಿಸಬೇಕು.

✅ ಶಿಕ್ಷಕರಿಗೆ ಪ್ರತ್ಯೇಕ ಕೋವಿಡ ಕೇರ್ ಕೇಂದ್ರಗಳನ್ನು ಜಿಲ್ಲಾ ಕೇಂದ್ರ/ತಾಲೂಕು ಕೇಂದ್ರ ಸ್ಥಾನಗಳಲ್ಲಿ ತೆರಯುವುದು

✅ ಕೋವಿಡ್ ಆಸ್ಪತ್ರೆ ಗಳಲ್ಲಿ ಶಿಕ್ಷಕರಿಗೆ ಕನಿಷ್ಠ ಸಂಖ್ಯೆಯಲ್ಲಾದರೂ ಆಕ್ಸಿಜನ್ ಸಹಿತ ಬೆಡ್ಗಳನ್ನು ಕಾಯ್ದಿರಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ರವಾನಿಸುವುದು

✅✅ ಶಾಲೆಗಳು 15/6/21ಕ್ಕೆ ಪುನರಾರಂಭ ಆಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಸಾರ್ವತ್ರಿಕವಾಗಿ ???? ಲಸಿಕೆಯನ್ನು ಕಂದಾಯ, ಆರೋಗ್ಯ & ಪಂಚಾಯತ್ ರಾಜ್ ಇಲಾಖೆಗಳ ಮಾದರಿಯಲ್ಲಿ ಕೊಡಿಸಬೇಕು.

✅ ರಜಾ ಅವಧಿಯಲ್ಲಿ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಜೂನ್ ತಿಂಗಳಾಂತ್ಯದೊಳಗೆ “ಗಳಿಕೆ ರಜೆ” ಗಳನ್ನು ಸೇವಾ ಪುಸ್ತಕಗಳಿಗೆ ಸೇರಿಸುವಂತೆ ಆದೇಶ ಮಾಡಿಸುವುದು.

ಚರ್ಚಿತ ವಿಷಯ 3️⃣: ಶಿಕ್ಷಕರ ಸಮಸ್ಯೆಗಳ ಬಗ್ಗೆ

✅ ಶೀಘ್ರವಾಗಿ ವರ್ಗಾವಣೆ ಕೈಗೊಳ್ಳಲು ಸರಕಾರದ ಮೇಲೆ ಕಾಲಮಿತಿ‌ ನಿಗದಿಪಡಿಸಿ, ಒತ್ತಡ ಹೇರಬೇಕು

✅ ಸೇವಾ ನಿರತ ಪದವೀಧರ ಶಿಕ್ಷಕರ ಸಮಸ್ಯೆ ಯನ್ನು ತಕ್ಷಣವೇ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು

✅ 5 ವರ್ಷ ಪೂರ್ಣಗೊಳಿಸಿದ CRP,BRP, ECO ಗಳಿಗೆ ಕೌನ್ಸೆಲಿಂಗ್ ನಡೆಸಿ, ಸ್ಥಳ ನಿಯುಕ್ತಿಗೊಳಿಸುವುದು, & ಖಾಲಿಯಾದ ಸ್ಥಾನಗಳನ್ನು ಕೌನ್ಸೆಲಿಂಗ್ ಮೂಲಕ ತುಂಬುವುದು

ಸಭೆಯಲ್ಲಿ ಭಾಗವಹಿಸಿದವರು

ಅಧ್ಯಕ್ಷತೆ:

ಶ್ರೀ ಶಂಭುಲಿಂಗನಗೌಡ ಪಾಟೀಲ್, ರಾಜ್ಯಾಧ್ಯಕ್ಷರು KSPSTA ಬೆಂಗಳೂರು

ಗೌರವ ಉಪಸ್ಥಿತಿ:

ಶ್ರೀ ಬಸವರಾಜ ಗುರಿಕಾರ್, ಉಪಾಧ್ಯಕ್ಷರು, AIPTF,ದೆಹಲಿ

ಶ್ರೀ ವಿ ಎಂ ನಾರಾಯಣ ಸ್ವಾಮಿ, ನಿಕಟ ಪೂರ್ವ ಅಧ್ಯಕ್ಷರು ,KSPSTA

ರಾಜ್ಯ ಉಪಾಧ್ಯಕ್ಷರು

ಶ್ರೀ ನಾಗೇಶ್

ಶ್ರೀಮತಿ ಪದ್ಮಲತಾ

ರಾಜ್ಯ ಸಹ ಕಾರ್ಯದರ್ಶಿಗಳು

ಶ್ರೀ ಚೇತನ್ ಎಸ್

ಶ್ರೀಮತಿ‌ ಸುಮತಿ

ರಾಜ್ಯ ಸಂಘಟನಾ ಕಾರ್ಯದರ್ಶಿಗಳು

ಶ್ರೀ ನಾಗನಗೌಡ ಎಂ ಎ

ಶ್ರೀಮತಿ ಕಮಟಹಳ್ಳಿ

ಇವರೊಂದಿಗೆ

ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು

ಭಾಗವಹಿಸಿದ್ದರು.

ತಮ್ಮ ಸೇವೆಯಲ್ಲಿ,

ಅಧ್ಯಕ್ಷರು/ಕಾರ್ಯದರ್ಶಿಗಳು & ಸರ್ವ ಪದಾಧಿಕಾರಿಗಳು

KSPSTA ರಾಜ್ಯ ಘಟಕ, ಬೆಂಗಳೂರು


Spread the love

Leave a Reply

Your email address will not be published. Required fields are marked *