ಡಿಡಿಪಿಐ ಕೆಳದಿಮಠ ಅವರೇ “ಅಗ್ನಿ ನಂದಕಗಳ” ಡ್ರೈ ಪೌಡರ್ ಕಥೆಯೇನು…!?
1 min readಧಾರವಾಡ: ‘ಮಾಮರವೆಲ್ಲೋ… ಕೋಗಿಲೆಯೆಲ್ಲೋ… ಏನೀ ಸೇಹ ಸಂಬಂಧ ಎಲ್ಲಿಯದು ಅನುಬಂಧ…’ ಚಿ.ಉದಯಶಂಕರ ರಚಿಸಿದ ಈ ಗೀತೆ ಯುಗಾದಿ ಹಬ್ಬದ ಸಮಯದಲ್ಲಿ ನೆನಪಾಗುವ ಕೆಲವೇ ಹಾಡುಗಳಲ್ಲಿ ಇದು ಒಂದು. ಆದರೆ, ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಸದ್ಯ ಪ್ರತಿಯೊಬ್ಬರು ಈ ಹಾಡನ್ನು ಹಾಡಿಕೊಳ್ಳುತ್ತಿದ್ದಾರೆ. ಆದರೆ, ಸ್ವಲ್ಪ ಸ್ವರ ಬದಲಾಗಿಸಿ ‘‘ಎಲ್ಲಿಯ ಅಥಣಿ… ಎಲ್ಲಿಯ ಧಾರವಾಡ… ಏನೀ ಪ್ರೇಮ್.. ಏನೀ ಸಂಬಂಧ..’ ಎಂಬ ಧಾಟಿಯಲ್ಲಿ.
ಈ ಸಾಹಿತ್ಯದ ಹಿಂದೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆಳದಿಮಠ ಸಾಹೇಬ್ರು ಇತ್ತೀಚಿಗೆ ಆದೇಶ ಹೊರಡಿಸಿ ‘ಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿಯ ಅಗ್ನಿ ನಂದಕಗಳ ಡ್ರೈಪೌಡರ ಮರು ತುಂಬಿಸಲು ಅಥಣಿ ತಾಲೂಕಿನಲ್ಲಿಯ ಅಡಹಳ್ಳಟ್ಟಿಯಲ್ಲಿರುವ ಚಿಕ್ಕಟ್ಟಿ ಕೃಷಿ ಉತ್ಪಾದಕ ಸಂಸ್ಥೆಯಲ್ಲೇ ಮರು ತುಂಬಿಸಬೇಕೆಂದು ಆದೇಶಿಸಿದ್ದಾರೆ.
ಸಾಮಾನ್ಯವಾಗಿ ಉತ್ತರ ಕರ್ನಾಟಕದ ಬಹುತೇಕ ಊರುಗಳಿಂದ ಸಾರ್ವಜನಿಕರು ಸೇರಿದಂತೆ ಉದ್ಯಮಿಗಳು ಕೂಡಾ ಹುಬ್ಬಳ್ಳಿ-ಧಾರವಾಡದಲ್ಲಿರುವ ಕೈಗಾರಿಕಾ ಸಂಸ್ಥೆಗಳು ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಅವಲಂಬಿತರಾಗಿದ್ದಾರೆ. ಅಂತಹದರಲ್ಲಿ ಅಥಣಿಯ ಅಡಹಳ್ಳಿಟ್ಟಿಯ ಪೌಡ್ರ್ ಗುಟ್ಟೇನು? ಎಂದು ಧಾರವಾಡ ಜಿಲ್ಲೆ ಅಗ್ನಿ ನಂದಕ ವ್ಯಾಪಾರಸ್ಥರು ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
ಶಿಕ್ಷಣ ಇಲಾಖೆಯ ಆಯುಕ್ತರಾದ ಸಿದ್ದರಾಮ್ ಬಿರಾದಾರ ಇವರು ಧಾರವಾಡದಲ್ಲೇ ಇರುವರು. ಇವರಾದರೂ ಅಡಹಳ್ಳಿಟ್ಟಿ ಗುಟ್ಟು-ರಟ್ಟು ಮಾಡುವರೇ ಎಂದು ಜಿಲ್ಲೆಯ ಸುಮಾರು 3000 ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಮುಖ್ಖಸ್ಥರು ಕಾದು ನೋಡುತ್ತಿದ್ದಾರೆ ಎನ್ನಲಾಗಿದೆ.