ಮುಖ್ಯಮಂತ್ರಿ, ಶಿಕ್ಷಣ ಸಚಿವರೇ “ಇವರನ್ನ” ನೋಡಿ- ರಾಜ್ಯದ ನೆಮ್ಮದಿಗೆ ಕಾರಣವಾಗಿ…!!

ಹುಬ್ಬಳ್ಳಿ: ಪರಿಸ್ಥಿತಿಯನ್ನ ಅವಲೋಕಿಸಿ ನಡೆದುಕೊಳ್ಳಬೇಕಾದ ಸರಕಾರಗಳು, ಹಳೆಯ ಉದ್ದೇಶವನ್ನೇ ಮುಂದಿಟ್ಟುಕೊಂಡು ಆದೇಶಗಳನ್ನ ಹೊರಡಿಸುತ್ತಿರುವುದು ಶಿಕ್ಷಣ ಇಲಾಖೆಯ ಲಕ್ಷಾಂತರ ಮನಸ್ಸುಗಳನ್ನ ಹದಗೆಡಿಸುತ್ತಿದೆ.
ಸರಕಾರ ಕೊರೋನಾ ಸಮಯದಲ್ಲಿ ತೆಗೆದುಕೊಂಡ ತೀರ್ಮಾನಗಳನ್ನ ಈಗಲೂ ಮುಂದುವರೆಸುತ್ತಿದ್ದು, ಶಿಕ್ಷಕ ಸಮೂಹ ಹೋರಾಟಕ್ಕೆ ಅಣಿಯಾಗುತ್ತಿದೆ. ಈ ಬಗ್ಗೆ ನಿಖರವಾಗಿ ಮಾತಾಡಿದ್ದಾರೆ ನೋಡಿ..
ತಮ್ಮ ಪದಾಧಿಕಾರಿಗಳಿಗೆ ಮಾಡಿಕೊಂಡ ಮನವಿಯ ಪ್ರತಿ..
ಆತ್ಮೀಯ ಸಂಘದ ಪದಾಧಿಕಾರಿಗಳೇ…..🙏
ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಕಡಿತಗೊಳಿಸಿರುವ ಕುರಿತು
Vacation ಸೌಲಭ್ಯ ವಿರುವ ಶಿಕ್ಷಕರಿಗೆ ಪ್ರತಿ ವರ್ಷ ಕೇವಲ 10 ಗಳಿಕೆ ರಜೆ ನೀಡಲಾಗುತ್ತದೆ. ಉಳಿದ non vacation ನೌಕರರಿಗೆ 30 ಗಳಿಕೆ ರಜೆ ನೀಡಲಾಗುತ್ತದೆ.!!
ಶಿಕ್ಷಕರಿಗೆ(ಶಾಲೆಗಳಿಗೆ) ಈ ವರ್ಷ ಮಧ್ಯಂತರ ರಜೆ ಅಕ್ಟೋಬರ್ 10 ರಿಂದ 20 ರ ವರೆಗೆ 11 ದಿನ ನೀಡಿದ್ದು ಅದರಲ್ಲಿ 6 ದಿನಗಳು ಸರ್ಕಾರಿ ರಜೆ ಸೇರಿವೆ. ಇವು ಎಲ್ಲಾ ರಾಜ್ಯ ಸರಕಾರಿ ರಜೆ ರಹಿತ ನೌಕರರಿಗೂ ದೊರೆಯುತ್ತವೆ. ಹಾಗಾಗಿ ಶಿಕ್ಷಕರಿಗೆ ಈ ವರ್ಷ ಮಧ್ಯಂತರ ರಜೆ ದೊರೆತಿದ್ದು ಕೇವಲ 5 ದಿನ ಮಾತ್ರ!!
👉ಪ್ರತಿ ವರ್ಷ ಶಿಕ್ಷಕರಿಗೆ ಮಧ್ಯಂತರ ರಜೆ ಅಕ್ಟೋಬರ್ ತಿಂಗಳಲ್ಲಿ 22 ರಿಂದ 26 ದಿನಗಳವರೆಗೆ ನೀಡಲಾಗುತ್ತದೆ.(ಪ್ರತಿ ವರ್ಷ ಮಧ್ಯಂತರ ರಜೆ ಹಂತಹಂತವಾಗಿ ಕಡಿಮೆ ಮಾಡುತ್ತ ಬರುತ್ತಿದ್ದಾರೆ ಯಾಕೆ?)
ಉದಾ: 2014-15 ಸಾಲಿನಲ್ಲಿ ಮಧ್ಯಂತರ ರಜೆಯನ್ನು ಅಕ್ಟೋಬರ್ 3 ರಿಂದ 28 ವರೆಗೆ 26 ದಿನಗಳ ರಜೆ ನೀಡಲಾಗಿದೆ.
👉ಜೊತೆಗೆ
ಪ್ರತಿ ವರ್ಷ ಬೇಸಿಗೆ ರಜೆ 48 ರಿಂದ 50 ದಿನಗಳು ನೀಡಲಾಗುತ್ತಿದ್ದು
ಬೇಸಿಗೆ ರಜೆಯನ್ನು ಈ ವರ್ಷ ಕಡಿತಗೊಳಿಸಲಾಗಿದೆ. ಮೇ 1 ರಿಂದ 28 ರ ವರೆಗೆ ಕೇವಲ 28 ದಿನಗಳು ಮಾತ್ರ…!!
(ಬೇಸಿಗೆ ರಜೆ ಹಂತ ಹಂತವಾಗಿ ಕಡಿತಗೊಳಿಸುತ್ತಿದ್ದಾರೆ)..!
ಕೋವಿಡ್ ಕಾರಣ ಮುಂದಿಟ್ಟು ಬೇಸಿಗೆ ರಜೆ ಕಡಿತಗೊಳಿಸಲಾಗಿದೆ.
ಈ ವರ್ಷ ರಜೆ ಕಡಿತಗೊಳಿಸಲು ನೀಡಿದ ಕಾರಣ
ಈ ವರ್ಷ ಭೌತಿಕ ತರಗತಿಗಳು ಪ್ರೌಢ ವಿಭಾಗದಲ್ಲಿ ಅಗಸ್ಟ್ 23 ರಿಂದ ಹಾಗೂ ಪ್ರಾಥಮಿಕ ವಿಭಾಗ ಸೆಪ್ಟೆಂಬರ್ 6 ರಿಂದ ಪ್ರಾರಂಭಿಸಿರುವುದು ಎಂದು ಹೇಳಬಹುದು…..!
ವಾಸ್ತವವಾಗಿ ಶಿಕ್ಷಕರು ಜೂನ್ 1 ರಿಂದಲೇ ಶಾಲೆಗಳಿಗೆ ಹೋಗಿ ಕರ್ತವ್ಯ ನಿರ್ವಹಿಸಿದ್ದಾರೆ online ತರಗತಿ ಮಾಡಿದ್ದಾರೆ…!
ಈ ಎಲ್ಲಾ ಅಂಶಗಳನ್ನು ಗಮನಿಸಿರುವ ಶಿಕ್ಷಕರು ಮಕ್ಕಳ ಹಿತದೃಷ್ಟಿಯಿಂದ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆ ಕಡಿತಗೊಳಿಸಿದ್ದರೂ ಸುಮ್ಮನಿದ್ದಾರೆ.
ಆದರೆ ಇದನ್ನು ನೌಕರರ ಹಿತದೃಷ್ಟಿಯಿಂದ ನೋಡಲಾಗಿ ಪ್ರತಿ ಶೈಕ್ಷಣಿಕ ವರ್ಷ 74 ದಿನಗಳಿಗಿಂತ ಹೆಚ್ಚು ರಜೆ ಪಡೆಯುತ್ತಿದ್ದು ಅದರಲ್ಲಿ ಸರಕಾರಿ ರಜೆ ಮತ್ತು ರವಿವಾರ ಗಳನ್ನು ಕಳೆದರೂ ವಾರ್ಷಿಕ ಕನಿಷ್ಠ 60 ದಿನಗಳ ರಜೆ ಶಿಕ್ಷಕರಿಗೆ ದೊರೆಯುತ್ತವೆ. ಇದೇ ಕಾರಣಕ್ಕೆ ಶಿಕ್ಷಕರಿಗೆ ವಾರ್ಷಿಕ ಕೇವಲ 10 ಗಳಿಕೆ ರಜೆ ಜಮಾ ಮಾಡಲಾಗುತ್ತದೆ….!
ಈ ವರ್ಷ ಮಧ್ಯಂತರ ರಜೆ
5 ದಿನ ಬೇಸಿಗೆ ರಜೆ 21 ದಿನ ಒಟ್ಟು 26 ದಿನಗಳ ರಜೆ ಮಾತ್ರ ನೀಡಲಾಗಿದೆ…!!
ರಜೆ ಸೌಲಭ್ಯವಿರುವ ಸಿಬ್ಬಂದಗಳಿಗೆ KCSR ಪ್ರಕಾರ ವಾರ್ಷಿಕ ಕೇವಲ 10 ಗಳಿಕೆ ರಜೆ ಜಮಾ ಮಾಡಲಾಗುತ್ತದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರಿಗೆ ಸಿಗುವ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯನ್ನು ಇಲಾಖೆಯ ಮೇಲಾಧಿಕಾರಿಗಳು ಹಂತ ಹಂತವಾಗಿ ಕಡಿತಗೊಳಿಸಿ ಆದೇಶ ಮಾಡುತ್ತಲೇ ಬರುತ್ತಿದ್ದಾರೆ….
ಈ ವರ್ಷ ಶಿಕ್ಷಕರಿಗೆ ಸಿಗಬೇಕಾದ ಸುಮಾರು 39 ದಿನಗಳ ರಜೆ ಕಡಿತಗೊಳಿಸಲಾಗಿದೆ!!
ಈಗ ಮಾನ್ಯ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರವಿವಾರ ಸಹ ಶಾಲೆ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈ ವರ್ಷದ ಶೈಕ್ಷಣಿಕ ಹಿನ್ನಡೆಯನ್ನು ಗಮನಿಸಿ.!!
ಕಡಿತಗೊಳಿಸಿರುವುದರ ಬಗ್ಗೆ ನನ್ನ ಚಕಾರವಿಲ್ಲ…! ನಾವೆಲ್ಲಾ ಖಂಡಿತವಾಗಿಯೂ ದುಡಿಯೋಣ… ಮಕ್ಕಳ ಪ್ರಗತಿಗಾಗಿ ಎಲ್ಲಾ ದಿನಗಳ ಬೋಧನೆಗೆ ನಾವೆಲ್ಲ ಸಿದ್ಧರಿದ್ದೇವೆ….
ಆದರೆ ಕಡಿತಗೊಳಿಸಿರುವ 39 ದಿನಗಳಿಗೆ ಗಳಿಕೆ ರಜೆ ಮಂಜೂರು ಮಾಡಿ ಸೇವಾ ಪುಸ್ತಕದಲ್ಲಿ ನಮೂದಿಸಲು ಇಲಾಖೆ ಮೇಲಾಧಿಕಾರಿಗಳು ಆದೇಶ ಮಾಡುವರೇ??!
ಯಾಕೆಂದರೆ ಶಿಕ್ಷಕರಾದ ನಾವು KCSR ಪ್ರಕಾರ ರಜೆ ಸಹಿತ (Vacation) ಹುದ್ದೆಗಳಿಗೆ ಸೇರಿದವರು.
ವಾರ್ಷಿಕವಾಗಿ ಮಧ್ಯಂತರ ಮತ್ತು ಬೇಸಿಗೆ ರಜೆ ಸೇರಿ 26 ದಿನಗಳ ರಜೆ ನೀಡಿ ವಾರ್ಷಿಕವಾಗಿ ಮೊದಲಿನಂತೆ ಕೇವಲ 10 ಗಳಿಕೆ ರಜೆ ನೀಡಿ ವರ್ಷಪೂರ್ತಿ ದುಡಿಸುವುದು ಎಷ್ಟರ ಮಟ್ಟಿಗೆ ನ್ಯಾಯ ಸಮ್ಮತ??!
🙏🙏👇👇
ಈ ಕುರಿತು ಜಿಲ್ಲಾ ಮತ್ತು ರಾಜ್ಯ ಸಂಘದ ಸಂಬಂಧಪಟ್ಟ ಅಧ್ಯಕ್ಷರಾಧಿಯಾಗಿ ಎಲ್ಲ ಪದಾಧಿಕಾರಿಗಳು ಮೇಲಾಧಿಕಾರಿಗಳು/ ಸಚಿವರ ಗಮನಕ್ಕೆ ತರುವರೇ?ಗಮನಕ್ಕೆ ತಂದು ಬದಲಾವಣೆ ಮಾಡಲು ದಿಟ್ಟ ಹೋರಾಟಕ್ಕೆ ರೆಡಿಯಾಗುವರೇ?