BIG Exclusive- ಧಾರವಾಡದ KIADB ಬಹುಕೋಟಿ ಹಗರಣ- ಚಿಕ್ಕಮಲ್ಲಿಗವಾಡದ ರವಿ ಕುರಬೆಟ್ಟ “ED” ವಶಕ್ಕೆ….

ಧಾರವಾಡ: ಕೆಐಎಡಿಬಿ ಬಹುಕೋಟಿ ಹಗರಣದಲ್ಲಿ ಇಡಿ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ರವಿ ಕುರಬೆಟ್ಟ ಎಂಬಾತನನ್ನ ವಶಕ್ಕೆ ಪಡೆದು, ಬಂಧನ ಮಾಡಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಕೆಐಎಡಿಬಿಯಲ್ಲಿ ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದ್ದ ಕುರಿತು ಜನಜಾಗೃತಿ ಸಂಘದ ಬಸವರಾಜ ಕೊರವರ ತೀವ್ರ ಹೋರಾಟ ಮಾಡಿದ್ದರು. ಹಾಗಾಗಿಯೇ, ಕಳೆದ ಒಂದು ವರ್ಷದ ಹಿಂದೆ ಹಲವರ ಬಂಧನವಾಗಿತ್ತು.
ಈಗ ಇಡಿ ವಶಕ್ಕೆ ಪಡೆದುಕೊಂಡಿರುವ ರವಿ ಕುರಬೆಟ್ಟ ಹಲವು ಕೋಟಿ ರೂಪಾಯಿಯ ಅವ್ಯವಹಾರದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ತೆರಳಿದ್ದ ರವಿ ಎಂಬಾತನನ್ನ ವಶಕ್ಕೆ ಪಡೆದು, ಬಂಧನ ಮಾಡಲಾಗಿದೆ ಎಂದು ಗೊತ್ತಾಗಿದೆ.
ಈ ಮೂಲಕ ಪ್ರಕರಣ ಮತ್ತೊಂದು ಮಜಲಿಗೆ ಸರಿದಿದ್ದು, ಇನ್ನೂ ಹಲವರು ಬಂಧನವಾಗುವ ಸಾಧ್ಯತೆಯಿದೆ ಎಂಬ ಮಾತಿದೆ.