ಎಸಿಪಿಗಳ ವರ್ಗಾವಣೆ- ಎಂ.ಎಸ್.ಹೊಸಮನಿ ಟ್ರಾಫಿಕ: ಆರ್.ಕೆ.ಪಾಟೀಲ CCRB

ಬೆಂಗಳೂರು: ಕರ್ನಾಟಕ ಸರಕಾರ 55 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಇಬ್ಬರು ಬಂದಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ಇನ್ಸ್ ಪೆಕ್ಟರಗಳಾಗಿ ಕಾರ್ಯನಿರ್ವಹಿಸಿರುವ ಎಂ.ಎಸ್.ಹೊಸಮನಿ ಅವರನ್ನ ರಾಜ್ಯ ಗುಪ್ತವಾರ್ತೆಯಿಂದ ಹುಬ್ಬಳ್ಳಿ-ಧಾರವಾಡ ನಗರ ಸಂಚಾರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಜಮಖಂಡಿ ಉಪವಿಭಾಗದಲ್ಲಿ ಡಿವೈಎಸ್ಪಿಯಾಗಿದ್ದ ಆರ್.ಕೆ.ಪಾಟೀಲರನ್ನ ಹುಬ್ಬಳ್ಳಿ-ಧಾರವಾಡ ನಗರ ಸಿಸಿಆರ್ ಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿಯ ಮಾರ್ಕೆಟ್ ಉಪ ವಿಭಾಗದಲ್ಲಿ ಎಸಿಪಿಯಾಗಿದ್ದ ನಾರಾಯಣ ಭರಮನಿ ಅವರನ್ನ ಖಾನಾಪುರ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಲಾಗಿದೆ.
ಕೆಲವು ದಿನಗಳಿಂದ ಖಾಲಿಯಿದ್ದ ಸಂಚಾರಿ ಎಸಿಪಿ ಪೋಸ್ಟ್ ಈ ಮೂಲಕ ಭರ್ತಿಯಾದಂತಾಗಿದೆ.