ಧಾರವಾಡದ ನಡು ಮಾರ್ಕೇಟನಲ್ಲೇ ತಲೆ ಒಡೆದ “ಚಾಕು”- ಅಂಗಡಿ ಮುಗ್ಗಟ್ಟು ಬಂದ್
ಧಾರವಾಡ: ನಡು ಮಧ್ಯಾಹ್ನವೇ ಗೌಸ್ ಎಂಬಾತನ ಉಪಟಳ ತಾಳದೇ ಚಾಕು ಎಂಬಾತ ಕಲ್ಲಿನಿಂದ ಹೊಡೆದು ಕೆಳಗೆ ಉರುಳಿಸಿದ ಘಟನೆ ಮಾರ್ಕೇಟ್‌ನಲ್ಲಿ ಸಂಭವಿಸಿದೆ.
ನೂರಾರೂ ಜನರು ಮಾರುಕಟ್ಟೆಯಲ್ಲಿ ಇದ್ದಾಗಲೇ ಹಣ್ಣುಗಳನ್ನ ಮಾರಾಟ ಮಾಡುತ್ತಿದ್ದ ಸುಭಾನ್ ಅಲಿಯಾಸ್ ಚಾಕು ಎಂಬಾತನೊಂದಿಗೆ ಗೌಸ್ ಜಗಳ ತೆಗೆದಿದ್ದಾನೆ. ಕೆಲ ಸಮಯದವರೆಗೂ ಸಹಿಸಿಕೊಂಡ ಚಾಕು, ಕಿರುಕುಳ ಹೆಚ್ಚಾದಾಗ ಅನಿವಾರ್ಯವಾಗಿ ಗೌಸನ ಮೇಲೆ ಮುರಿದುಕೊಂಡು ಬಿದ್ದಿದ್ದಾನೆ.
ಬಲವಾಗಿ ಕಲ್ಲಿನ ಏಟು ಬಿದ್ದ ಪರಿಣಾಮ ರಕ್ತ ಅತಿಯಾಗಿ ಬಿದ್ದಿತ್ತು. ಈ ದೃಶ್ಯವನ್ನ ನೋಡಿದ ಮಾಲೀಕರು ಅಂಗಡಿ-ಮುಗ್ಗಟ್ಟುಗಳನ್ನ ಬಂದ್ ಮಾಡಿದರು.
ಶಹರ ಠಾಣೆ ಪೊಲೀಸರು ಗಾಯಾಳುವನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.