ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಬೆಸ್ಟ್- ಕುಂದಗೋಳ ಲಾಸ್ಟ್: ಧಾರವಾಡ ಅಷ್ಟಕ್ಕಷ್ಟ್..!
ಧಾರವಾಡ: ಎಸ್ ಎಲ್ ಎಲ್ ಸಿ ಫಲಿತಾಂಶದಲ್ಲಿ ವಿದ್ಯಾಕಾಶಿಯ ಹಣೆಬರಹ ಏನು ಎನ್ನುವುದು ಗೊತ್ತಾಗಿದ್ದು, ಕಲಘಟಗಿ ಮತ್ತು ನವಲಗುಂದ ತಾಲೂಕಿನಿಗಿಂತ ಕಡಿಮೆ ಪ್ರಮಾಣದಲ್ಲಿ ಸಾಧನೆ ಮಾಡಿದ್ದು, ಬಹುತೇಕರು ತಲೆತಗ್ಗಿಸುವಂತಾಗಿದೆ.
ರಾಜ್ಯದ ತಾಲೂಕುಗಳ ಪಟ್ಟಿಯನ್ನ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಒಟ್ಟು 204 ತಾಲೂಕುಗಳ ಬಗ್ಗೆ ಇಲಾಖೆ ಮಾಹಿತಿಯನ್ನ ಹೊರ ಹಾಕಿದೆ. ಆ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ತಾಲೂಕಿನ 2176 ವಿದ್ಯಾರ್ಥಿಗಳಲ್ಲಿ 1616 ವಿದ್ಯಾರ್ಥಿಗಳು ಪಾಸಾಗಿ 128 ಸ್ಥಾನವನ್ನ ಪಡೆದಿದೆ. ನವಲಗುಂದ ತಾಲೂಕಿನ 1957 ವಿದ್ಯಾರ್ಥಿಗಳ ಪೈಕಿ 1448 ಪಾಸಾಗಿದ್ದು 127ನೇ ಸ್ಥಾನವನ್ನ ಪಡೆದಿದೆ. ಹುಬ್ಬಳ್ಳಿ ಶಹರದಲ್ಲಿ 7533 ವಿದ್ಯಾರ್ಥಿಗಳ ಪೈಕಿ 5518 ಪಾಸಾಗಿ 128 ಸ್ಥಾನವನ್ನ ಪಡೆದಿದೆ. ಹುಬ್ಬಳ್ಳಿ ಗ್ರಾಮೀಣದಲ್ಲಿ 2991 ವಿದ್ಯಾರ್ಥಿಗಳ ಪೈಕಿ 2140 ಪಾಸಾಗಿ 138 ಸ್ಥಾನದಲ್ಲಿದೆ. ಇನ್ನುಳಿದಂತೆ ಧಾರವಾಡ ಶಹರದ 4641 ವಿದ್ಯಾರ್ಥಿಗಳ ಪೈಕಿ 2993 ಪಾಸಾಗಿ 169 ಸ್ಥಾನದಲ್ಲಿಯೂ, ಧಾರವಾಡ ಗ್ರಾಮೀಣ 3044 ವಿದ್ಯಾರ್ಥಿಗಳ ಪೈಕಿ 1890 ಪಾಸಾಗಿ 178 ಸ್ಥಾನವನ್ನ, ಕುಂದಗೋಳ ತಾಲೂಕಿನ 1641 ವಿದ್ಯಾರ್ಥಿಗಳ ಪೈಕಿ 772 ವಿದ್ಯಾರ್ಥಿಗಳು ಪಾಸಾಗಿ 200 ಸ್ಥಾನವನ್ನ ಪಡೆದಿದೆ.
ಧಾರವಾಡದಲ್ಲಿ ವಿದ್ಯೆ ಕಲಿಯುವ ಸಾಧನವಾಗದೇ ಕಾಸಿನ ಸಾಧನವಾಗಿರುವುದೇ ಕಳಫೆ ದರ್ಜೆಗೆ ಇಳಿಯುವುದಕ್ಕೆ ಕಾರಣವಾಗಿದೇಯಾ ಎಂಬುದನ್ನ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ. ಇಲ್ಲದಿದ್ದರೇ ಮುದೊಂದು ವಿದ್ಯಾಕಾಶಿಯ ಹೆಸರು ಅಳಿಸಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ..