ಒಂದೇ ಒಂದು ಲಾರಿ ಉಸುಕಿನಲ್ಲಿ ನಿರ್ಮಾಣವಾಯಿತು ಶ್ರೀರಾಮನ ಮಂದಿರ: ಎಲ್ಲಿ ಗೊತ್ತಾ…?
ಧಾರವಾಡ: ಇಡೀ ದೇಶವೇ ಶ್ರೀರಾಮನ ಮಂದಿರದ ನಿರ್ಮಾಣದ ಕಾರ್ಯಕ್ಕೆ ಶಂಕುಸ್ಥಾಪನೆಗಾಗಿ ಕಾಯುತ್ತಿರುವ ಸಮಯದಲ್ಲೇ ವಿದ್ಯಾನಗರಿಯಲ್ಲಿ ಅಚ್ಚರಿಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಅದೇಗೆ ಅನ್ನೋದು ಮಾತ್ರ ನಿಮಗೆ ಖುಷಿ ಕೊಡೋ ವಿಚಾರ.
ಕೆಲಗೇರಿಯ ಕಲಾವಿದ ಮಂಜುನಾಥ ಹಿರೇಮಠ ತನ್ನ ಕೈಚಳಕದ ಮೂಲಕ ಅಯೋಧ್ಯೆ ಮಾದರಿಯ ಶ್ರೀರಾಮನ ಮಂದಿರವನ್ನ ಕೆಲವೇ ಗಂಟೆಗಳಲ್ಲಿ ನಿರ್ಮಿಸಿದರು. ಅದಕ್ಕೆ ಅವರು ಬಳಕೆ ಮಾಡಿದ್ದು ಒಂದೇ ಒಂದು ಲಾರಿ ಮರಳು. ಆರು ಅಡಿ ಎತ್ತರದ ಹತ್ತು ಅಡಿ ಅಗಲದ ಈ ಮಂದಿರದ ರೂಪುರೇಷೆ ಎಲ್ಲರ ಗಮನ ಸೆಳೆಯಿತು.
ಜನಜಾಗೃತಿ ವೇದಿಕೆಯ ಸ್ಥಾಪಕ ಬಸವರಾಜ ಕೊರವರ ಇಂತಹ ಕಾರ್ಯಕ್ರಮಕ್ಕೆ ವೇದಿಕೆಯನ್ನ ರೂಪಿಸಿದ್ದರು. ಕಲಾವಿದನ ಕೈಚಳಕ ಹೊರ ಹಾಕುವ ಜೊತೆಗೆ ಪ್ರತಿಯೊಬ್ಬರ ಮನದಲ್ಲಿ ಮೂಡುವ ಶ್ರೀರಾಮನ ಸ್ಮರಣೆ ಮಾಡುವುದು ಇದರ ಉದ್ದೇಶವಾಗಿತ್ತು.
ಅಯೋಧ್ಯೆಯ ಶಂಕು ಸ್ಥಾಪನೆಯ ಮುನ್ನವೇ ಅರಳಿದ ಈ ಕಲೆಗೆ ಎಲ್ಲರೂ ಮನಸೋತರು.