6 ಕೇಸ್ ಇದ್ದಾಗ್ ಲಾಕ್‌ಡೌನ್, ಸಾವಿರ್ ಕೇಸ್ ಆಗಾಕತ್ಯಾವ್ ಈಗ್ಯಾಕ್ ಮಾಡವಲ್ರೀ… ಮೂಲ ನಿವಾಸಿಗಳ ಪ್ರಶ್ನೆ
ಧಾರವಾಡ: ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಿದ್ದಾಗ ಲಾಕ್‌ಡೌನ್ ಮಾಡಿದ್ದರು. ಈಗ ಪ್ರತಿ ದಿನವೂ ನೂರಾರು ಸೋಂಕಿತರು ಪತ್ತೆಯಾಗುತ್ತಿದ್ದಾರೆ, ಈಗೇಕೆ ಲಾಕ್‌ಡೌನ್ ಮಾಡುತ್ತಿಲ್ಲ ಎಂದು ಸಿಎಫ್‌ಡಿ ಮತ್ತು ಭಾರತದ ಮೂಲ ನಿವಾಸಿಗಳ ಒಕ್ಕೂಟದ ಪ್ರಮುಖರು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು, ಕಡಿಮೆ ಕೇಸ್ ಇದ್ದಾಗ ಧಾರವಾಡವನ್ನ ರೆಡ್ ಜೋನ್‌ನಲ್ಲಿ ಸೇರಿಸಿದ್ದೀರಿ. ಈಗೇಕೆ ಮಾಡುತ್ತಿಲ್ಲ. ಕಾರ್ಮಿಕರು ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅವರನ್ನ ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ವಿ.ಕೆ.ಮುಂಗಾ, ಡಾ.ಮನುಜ ಗುಯಲ, ಎಸ್.ಆರ್.ಹಿರೇಮಠ, ನವೀದ ಮುಲ್ಲಾ, ಶಮಿಅಹ್ಮದ ಮುಲ್ಲಾ, ಪಿತಾಂಬ್ರಪ್ಪ ಬೀಳಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.