Posts Slider

Karnataka Voice

Latest Kannada News

ಜನರೇ ಗಾಬರಿಯಾಗ್ಬೇಡಿ: ಧಾರವಾಡ ಜಿಲ್ಲಾಧಿಕಾರಿ ಆದೇಶ ಪಾಲಿಸಿ: ಮನೆಯಲ್ಲೇ ಆರಾಮಾಗಿರಿ

Spread the love

ಕೋವಿಡ್ ತಡೆಯಲು ಧಾರವಾಡ ಜಿಲ್ಲೆಯಾದ್ಯಂತ 15-07-2020 ರಿಂದ 24-07-2020 ವರೆಗೆ ಲಾಕ್ ಡೌನ್

ಲಾಕ್ ಡೌನ್ ಅವಧಿಯಲ್ಲಿ ಈ ಕೆಳಕಂಡ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಆದೇಶ ಹೊರಡಿಸಿದ್ದಾರೆ.

1) ರವಿವಾರದ ಸಂಪೂರ್ಣ ಲಾಕ್ ಡೌನ್ ಹೊರತುಪಡಿಸಿ ,
ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತರಕಾರಿ, ಹಾಲು,ಹಣ್ಣು, ಕಿರಾಣಿ, ಬೇಕರಿ, ಮಾಂಸ , ಪಶು ಆಹಾರ ಮತ್ತಿತರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ.

2) ಹೋಟೆಲುಗಳಿಂದ ಆಹಾರ ಪದಾರ್ಥಗಳ ಪಾರ್ಸೆಲ್ ನೀಡಲು ಅವಕಾಶ.

3) ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳು ಬೆಳಗಿನ 9 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ. ಕಾರ್ಮಿಕರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಂದ ಪಾಸುಗಳನ್ನು ಪಡೆಯಬೇಕು. ಇ ಕಾಮರ್ಸ್, ಪಾರ್ಸೆಲ್ ಪೂರೈಕೆಗೆ ಅವಕಾಶವಿದೆ.

4) ಪೌಲ್ಟ್ರಿ ಫಾರ್ಮುಗಳ ಚಟುವಟಿಕೆಗಳಿಗೆ ಅವಕಾಶವಿದೆ.

5) ಬೀಜ, ರಸಗೊಬ್ಬರ ಮಾರಾಟ, ಕೃಷಿ ಪೂರಕ ವಹಿವಾಟುಗಳು ,ರೈತರ ಒಕ್ಕಲುತನ ಕೆಲಸ ಕಾರ್ಯಗಳಿಗೆ ಅವಕಾಶ.

6) ಕೃಷಿ ಪೂರಕ ಮತ್ತು ಆಹಾರ ಉತ್ಪಾದನಾ ಘಟಕಗಳಿಗೆ ಅವಕಾಶ.

7) ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ವಲಯದ ನಿಗಮ, ಮಂಡಳಿಗಳ ನೌಕರರು ತಮ್ಮ ಗುರುತಿನ ಚೀಟಿಗಳನ್ನು ತೋರಿಸಿ ಕರ್ತವ್ಯಕ್ಕೆ ಹೋಗಿ ಬರಲು ಅವಕಾಶ.

8) ರೇಲ್ವೇ, ಬ್ಯಾಂಕ್, ಎಟಿಎಂ ನೌಕರರಿಗೆ ಅವಕಾಶ.

9) ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವೈದ್ಯರು, ನರ್ಸ್,ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಹಾಯಕ ಸಿಬ್ಬಂದಿಗಳ ಸಂಚಾರಕ್ಕೆ ಅವಕಾಶವಿದೆ.

10) ಕೋವಿಡ್ ಕೇರ್ ಸೆಂಟರುಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿಗೆ ಅವಕಾಶ.

11) ಖಾಸಗಿ ಭದ್ರತಾ ಸಿಬ್ಬಂದಿಯ ಕರ್ತವ್ಯಕ್ಕೆ ಅವಕಾಶ.

12) ಔಷಧಿ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ.

13) ಪಡಿತರ ವಿತರಣೆಗಾಗಿ ಆಹಾರ ಧಾನ್ಯ ಪೂರೈಸುವ ಭಾರತೀಯ ಆಹಾರ ನಿಗಮ ಮತ್ತು ಇತರ ಗೋದಾಮುಗಳಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಸಂಚಾರಕ್ಕೆ ವಿನಾಯಿತಿ.

14) ದಿನಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳು. ಪತ್ರಿಕಾ ವಿತರಕರು, ಹಂಚುವವರಿಗೆ ಅವಕಾಶ.


Spread the love

Leave a Reply

Your email address will not be published. Required fields are marked *