ಅಮ್ಮಿನಬಾವಿಯಲ್ಲಿ ಜಮೀನಿಗಾಗಿ ಕೊಲೆ-ಐವರಿಗೆ ಗಾಯ
ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಓರ್ವನ ಕೊಲೆಯಾಗಿದ್ದು, ಹಲವರು ಗಾಯಗೊಂಡ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸಂಭವಿಸಿದೆ.
ಶಿವಪ್ಪ ಕೊಡಬಳಗಿ ಎಂಬ ವ್ಯಕ್ತಿ ಕೊಲೆಯಾಗಿದೆ. ಐವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಜಮೀನು ವಿವಾದದ ಹಿನ್ನೆಲೆ ಎರಡು ಕುಟುಂಬದ ನಡುವೆ ಗಲಾಟೆಯಾಗಿತ್ತು.ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.