ಧಾರವಾಡ- ತಾಯಿಯೊಂದಿಗೆ ಹೆಜ್ಜೆ ಹಾಕುತ್ತಿದ್ದ ಶ್ರೀನಿಧಿ ನೀರುಪಾಲು: ಬಾಲಿಕಿಗಾಗಿ ಎನ್ ಡಿಆರ್ ಎಫ್ ಹುಡುಕಾಟ
1 min readಕಲಘಟಗಿ: ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಎಲ್ಲ ಹಳ್ಳ ಕೆರೆಗಳು ನೀರು ಭರ್ತಿಯಾಗಿ ತುಂಬಿ ಹರಿಯುತ್ತಿದ್ದು, ಅಂತಹದರಲ್ಲೇ ಬಾಲಕಿಯೋರ್ವಳು ಹಳ್ಳದಲ್ಲಿ ತೇಲಿ ಹೋದ ಘಟನೆ ತಾಲ್ಲೂಕಿನ ಗಂಜಿಗಟ್ಟಿ ಗ್ರಾಮದ ಬಳಿ ಸಂಭವಿಸಿದ್ದು, ಇನ್ನೂವರೆಗೂ ಬಾಲಿಕಯ ಪತ್ತೆಯಾಗಿಲ್ಲ.
ಶ್ರೀನಿಧಿ ಹನುಮಂತಪ್ಪ ಗಾಣಿಗೇರ ಎಂಬ ಎಂಟು ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಈ ಹಿರೇಕೇರಿ ರಸ್ತೆ ದಾಟುವಾಗ ನೀರಿನಲ್ಲಿ ತೇಲಿ ಹೋಗಿದ್ದಾಳೆ.
ಹಿರೇಕೇರಿಗೆ ಬೆಡ್ತಿ ಹಳ್ಳದ ನೀರು ಬರುವುದರಿಂದ ಅಪಾರ ಪ್ರಮಾಣದ ನೀರು ಸಂಗ್ರಹಣೆ ಆಗುತ್ತದೆ. ಈ ಕೆರೆಗೆ ಸೇತುವೆ ಇಲ್ಲದ ಕಾರಣ ಹೆಚ್ಚಿನ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದನ್ನ ನೋಡಲು ಹೋದಾಗ ಮಗು ಜಾರಿಬಿದ್ದು ತೇಲಿ ಹೋಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ವಿಜಯ ಬಿರಾದಾರ ಹಾಗೂ ರಕ್ಷಣಾ ತಂಡ ಧಾವಿಸಿದ್ದು ಬಾಲಕಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಮಗುವಿನ ಕುಟುಂಬದ ಸದಸ್ಯರ ಸ್ಥಿತಿ ಹೇಳತೀರದಾಗಿದ್ದು, ಪ್ರತಿಯೊಬ್ಬರು ಕಣ್ಣೀರಾಕುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಭೇಟಿ ನೀಡಿದ್ದು, ಹುಡುಕಾಟ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಬಾಲಕಿ ನಾಪತ್ತೆಯಾದ ಜಾಗದಲ್ಲಿ ಎನ್ ಡಿ ಆರ್ ಎಫ್ ತಂಡ ಹುಡುಕಾಟ ಆರಂಭಿಸಿದ್ದು, ಮುಳ್ಳು ಕಂಟೆಗಳು ಇರುವುದು ಹುಡುಕಾಟಕ್ಕೆ ತೊಂದರೆಯಾಗುತ್ತಿದೆ.