ಧಾರವಾಡ ಜಿಲ್ಲೆಯಲ್ಲಿ ಮತ್ತೆ ಏಳು ಜನರ ಸಾವು: ಇವತ್ತು ಮತ್ತೆ 75 ಪಾಸಿಟಿವ್
ಧಾರವಾಡ: ಕೊರೋನಾ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ನಿನ್ನೆವರೆಗೆ 20ಕ್ಕಿದ್ದ ಸಂಖ್ಯೆ ಇಂದು 27ಕ್ಕೇರಿದ್ದು, ಜಿಲ್ಲೆಯಲ್ಲಿ ಒಟ್ಟು 832 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಂತಾಗಿದ್ದು, ಇಲ್ಲಿಯವರೆಗೆ 293 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಪ್ರತಿದಿನವೂ ಪಾಸಿಟಿವ್ ಪ್ರಕರಣಗಳು ಹೆಚ್ಚೇಚ್ಚು ಬರುತ್ತಿದ್ದು, ಗ್ರಾಮೀಣ ಭಾಗದಲ್ಲೂ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಜಿಲ್ಲೆಯಲ್ಲಿ ಈಗ 512 ಪ್ರಕರಣಗಳು ಸಕ್ರಿಯವಾಗಿವೆ.
ಬಹುತೇಕ ಕೊರೋನಾ ಪಾಸಿಟಿವ್ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮರಣ ಹೊಂದಿದವರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಆತಂಕ ಹೆಚ್ಚಿಸಿದೆ. ಈ ಎಲ್ಲ ಮಾಹಿತಿಯು ಹೆಲ್ತ್ ಬುಲೆಟಿನ್ ಬಂದಿದೆ. ಜಿಲ್ಲಾವಾರು ಮಾಹಿತಿ ಕೆಲವೇ ನಿಮಿಷಗಳಲ್ಲಿ ಬರಲಿದ್ದು, ಓದುಗರಿಗೆ ಅದು ಕೂಡ ಕರ್ನಾಟಕ ವಾಯ್ಸ್ ದೊರಕಿಸಲಿದೆ.
ತೀರಿಕೊಂಡವರ ಮಾಹಿತಿ ಈ ರೀತಿಯಿದೆ.
ಪಿ-18716 ವಯಸ್ಸು 55 ಗಂಡು
ಪಿ-23232 ವಯಸ್ಸು 88 ಗಂಡು
ಪಿ-24839 ವಯಸ್ಸು 65 ಗಂಡು
ಪಿ-25532 ವಯಸ್ಸು 67 ಗಂಡು
ಪಿ-28410 ವಯಸ್ಸು 78 ಗಂಡು
ಪಿ-30725 ವಯಸ್ಸು 54 ಗಂಡು
ಪಿ-30965 ವಯಸ್ಸು 85 ಗಂಡು