Posts Slider

Karnataka Voice

Latest Kannada News

ಪೊಲೀಸರನ್ನೇ ಕೊಲೆ ಮಾಡಲು ಬಂದವರಿಗೆ ಶಿಕ್ಷೆ: ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣನವರ ಗುಡ್ ವರ್ಕ್…!

1 min read
Spread the love

ಧಾರವಾಡ: ತಾವೂ ಮಾಡಿದ ತಪ್ಪನ್ನೇ ಮುಚ್ಚಿಕೊಳ್ಳಲು ಹೋಗಿ ಇನ್ಸ್‌ಪೆಕ್ಟರ್ ವಿಜಯ ಬಿರಾದಾರ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಬಂದ ಕಿರಾತಕರಿಗೆ ತಕ್ಕ ಶಿಕ್ಷೆಯಾಗಿದ್ದು, ಇದನ್ನ ತನಿಖೆ ಮಾಡಿ ಸರಿಯಾದ ಜಾರ್ಜಶೀಟ್ ಸಲ್ಲಿಸಿದ ಶ್ರೇಯಸ್ಸು ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮತ್ತು ವಿಶ್ವನಾಥ  ಹಿರೇಗೌಡರ ಅವರಿಗೆ  ಸಲ್ಲುತ್ತೆ.
ನಟೋರಿಯಸ್ ಬಚ್ಚಾಖಾನ್, ಬೆತ್ತನಗೆರೆ ಶಂಕರ, ದೇವಸ್ಥಾನಗಳ ಕಳ್ಳ ಡಲಾಯಿತನಂತವರಿಗೂ ಶಿಕ್ಷೆಯಾಗಿರುವುದು ಈ ಪ್ರಕರಣದ ವಿಶೇಷ.

ಇಡೀ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ…

Dt:28/07/2020

Cr No:108/10.

ಕಲಂ.143, 147, 148, 114, 323, 324, 353, 341, 506 ಸಹ ಕಲಂ 149 ಐಪಿಸಿ.‌

Sc No: 7/11, Sc No: 25/16, Sc No:138/16

ಆರೋಪಿತರು:-
ಎ1) ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ ವಯಾ: 38 ವರ್ಷ ಸಾ:ಮುಂಬೈ ನಾಗಪಾಳ. ಆರ್.ಎಸ್.ನೇಮಕರ ಮಾರ್ಕ ಸೌಥ ಪೇಸ ಚಾಳ ರೂಮನ 4 & 5 ಮುಂಬೈ-08, ಹಾಲಿ: ಕೇಂದ್ರ ಕಾರಾಗೃಹ ಮೈಸೂರ.

ಎ2) ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ ವಯಾ: 28 ವರ್ಷ ಸಾ: ಬೆತ್ತನಗೇರಿ
ನೆಲಮಂಗಲ ತಾ ವ ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ.

ಎ3) ಮುನಿರಾಜು ತಂದೆ ಹನಮಂತರಾಯಪ್ಪ ವಯಾ: 24 ವರ್ಷ ಸಾ: ಬೆತ್ತನಗೆರೆ ನೆಲಮಂಗಲ ತಾ/ ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ

ಎ5) ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ ವಯಾ:18 ವರ್ಷ ಸಾ: ಧಾರವಾಡ ಹಾವೇರಿ ಪೇಟ ಮೇದಾರ ಓಣಿ ದ್ಯಾಮವ್ವನಗುಡಿ ಓಣಿ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ.

ಪ್ರಕರಣದ ಸಂಕ್ಷಿಪ್ತ ವಿವರ

ಧಾರವಾಡ ಉಪನಗರ ಪೊಲೀಸ ಠಾಣಾ ಹದ್ದಿ ಪೈಕಿ, ಗುಲಗಂಜಿಕೊಪ್ಪ ಪ್ರದೇಶದ ಕೇಂದ್ರ ಕಾರಾಗೃಹದಲ್ಲಿ ಕೆಲ ಖೈದಿಗಳು ಗಾಂಜಾ ಎಂಬ ಮಾದಕ ವಸ್ತು ಹಾಗೂ ಇತರೇ ನಿಷೇಧಿತ ವಸ್ತುಗಳನ್ನು ಹೊಂದಿ ಬಳಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಅಂದಿನ ಧಾರವಾಡ ಶಹರದ ಸಹಾಯಕ ಪೊಲೀಸ ಆಯುಕ್ತಕರಾದ ಸಂಜೀವ ಪಾಟೀಲ ಹಾಗೂ ಇದರಲ್ಲಿಯ ಪಿರ್ಯಾದಿತರಾದ‌ ವಿಜಯ ಬಿರಾದಾರ ಪಿ.ಐ ಹಾಗೂ ಸಿಬ್ಬಂದಿಗಳಾದ 1) ಎಸ್.ಎಚ್ ದೊಟಿಕಲ‌ ಹೆಚ್.ಸಿ 2039.
2) ಯು.ಆಯ್. ಕಾಡಮ್ಮನವರ ಪಿ.ಸಿ 2870.
3) ವಿ.ಪಿ.ಕಿಲ್ಲೆದಾರ ಪಿ.ಸಿ 2795
4) ಎಸ್.ಐ. ಲಮಾಣಿ ಪಿ.ಸಿ. 2852
4) ಸುರೇಶ ರಾಣೆಬೆನ್ನೂರ ಪಿ.ಸಿ 2522. ಹಾಗೂ ಇತರೆ ಸಿಬ್ಬಂದಿ
ಸಂಗಡ ನಾಗರೀಕ ಉಡುಪಿನಲ್ಲಿ ಖೈದಿಗಳ ಶೋಧನೆ ಕುರಿತು ದಿನಾಂಕ:23.05.2010 ರಂದು ಮದ್ಯಾಹ್ನ 12.30 ಗಂಟೆಗೆ : ಕೇಂದ್ರ ಕಾರಾಗೃಹಕ್ಕೆ ಹೋಗಿ, ಅಂದಿನ ಕಾರಾಗೃಹದ ಅಧೀಕ್ಷಕರಾದ ಶ್ರೀ ಸಂಗಪ್ಪ.ಡಿ. ಮತ್ತು ಮುಖ್ಯ ಜೈಲರ ಹಾಗೂ ಜೈಲರ ರವರಿಗೆ ವಿಷಯ ತಿಳಿಸಿ, ಅವರೊಂದಿಗೆ ಕಾರಾಗೃಹದ ಒಳಗಡೆ ಹೋಗಿ, ಸಜಾ ಬಂದಿಯಾದ 1 ನೇ ಆರೋಪಿತ
1) ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ ವಯಾ: 38 ವರ್ಷ ಸಾ:ಮುಂಬೈ ನಾಗಪಾಳ ಆರ್.ಎಸ್.ನೇಮಕರ ಮಾರ್ಕ ಸೌಥ ಪೇಸ ಚಾಳ ರೂಮನ 4 & 5 ಮುಂಬೈ-08 ಹಾಲಿ: ಬೆಂಗಳೂರ ಮುಸ್ಲಿಂ ಕಾಲನಿ ತಾಜ ಸುಲೇಮಾನ ಬಿಲ್ಲಿಂಗ ಕೆಫೆ ಬೋರ್ಡ ಕಾಲನಿ ಕೆ.ಜಿ. ಹಳ್ಳಿ ಬೆಂಗಳೂರ-45 ಸದ್ಯ ಕೇಂದ್ರ ಕಾರಾಗೃಹ ಮೈಸೂರ.
ಇರುವ ಪ್ರತ್ಯೇಕ ಕೊಠಡಿ ನಂ.3 ಹಾಗೂ ವಿಚಾರಣಾ ಬಂದಿಗಳಾದ ಆರೋಪಿ ಅನಂ.2) ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ ವಯಾ: 28 ವರ್ಷ ಸಾ: ಬೆತ್ತನಗೇರಿ. ನೆಲಮಂಗಲ ತಾ ವ ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ ಮತ್ತು
ಆರೋಪಿ ನಂ 3) ಮುನಿರಾಜು ತಂದೆ ಹನಮಂತರಾಯಪ್ಪ ವಯಾ: 24 ವರ್ಷ ಸಾ: ಬೆತ್ತನಗೆರೆ ನೆಲಮಂಗಲ ತಾ ವ ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ ನೇದವರು ಇರುವ ಪ್ರತ್ಯೇಕ ಕೊಠಡಿ ನಂ.5 ನೇದ್ದನ್ನು ಶೋಧಿಸಲು ಹೋದಾಗ, ಸದರಿ ಆರೋಪಿತರು ತಮ್ಮ ಕೊಠಡಿಗಳನ್ನು ಶೋಧನೆ ಮಾಡಲು ನಿವ್ಯಾರು ಅಂತ ಕೂಗಾಡಿದಾಗ, ಸದರಿ ಪಿರ್ಯಾದಿತರು ತಾವು ಪೊಲೀಸ್ ಅಧಿಕಾರಿಗಳು ಅಂತ ಹಾಗೂ ಮೇಲಾಧಿಕಾರಿಗಳು ತಿಳಿಸಿದಂತೆ ನಿಷೇಧಿತ ವಸ್ತುಗಳನ್ನು ಶೋಧನೆ ಮಾಡಲು ಬಂದಿದ್ದಾಗಿ ತಿಳಿಸಿ ಹೇಳಿದಾಗ್ಯೂ, ಸದರಿ ಆರೋಪಿತರು ಕೂಗಾಡ ಹತ್ತಿದಾಗ ಹಾಜರಿದ್ದ ಜೈಲ ಅಧಿಕಾರಿಗಳು ಸದರಿ ಆರೋಪಿತರಿಗೆ ತಿಳುವಳಿಕೆ ನೀಡಿ, ಬುದ್ಧಿವಾದ ಹೇಳಿದರೂ ಕೇಳದೇ, ಮದ್ಯಾಹ್ನ 1.00 ಗಂಟೆ ಸುಮಾರಿಗೆ ಜೈಲ ಆವರಣದಲ್ಲಿ ಅಲ್ಲಲ್ಲಿ ಇದ್ದ ಖೈದಿಗಳಾದ ಇದರಲ್ಲಿ
ಆರೋಪಿ ಅನಂ. 4 ಇಕ್ಬಾಲಖಾನ ತಂದೆ ಅಮೀರಖಾನ ಪಠಾಣ ವಯಾ: 42 ವರ್ಷ ಸಾ: ಬೆಳಗಾವಿ ಬಾಕ್ಸ್ಟ ರೋಡ ಆಜಂ ನಗರ ಸಹ್ಯಾದ್ರಿನಗರ 1 ನೇ ಕ್ರಾಸ ಹಾಲಿ: ಧಾರವಾಡ ಕೇಂದ್ರ ಕಾರಾಗೃಹ ಮತ್ತು
5 ನೇ ಆರೋಪಿತ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ ವಯಾ: 18 ವರ್ಷ ಸಾ: ಧಾರವಾಡ ಹಾವೇರಿ
ಪೇಟ ಮೇದಾರ ಓಣಿ ದ್ಯಾಮವ್ವನಗುಡಿ ಓಣಿ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ. ಹಾಗೂ ಇನ್ನಿತರ ಅಪರಿಚಿತ 10-15 ಜನ ಖೈದಿಗಳಿಗೆ ಕೂಗಿ ಕರೆದು, ಅವರಿಗೆ ಪ್ರೋತ್ಸಾಹಿಸಿ, ಪೊಲೀಸರು ಸದರಿಯವರ ಮೇಲೆ ಕೇಸು ಹಾಕಿ, ಜೈಲಿಗೆ ಕಳಿಸಿದ್ದರ ಸಿಟ್ಟಿನಿಂದ ಇವರನ್ನು ಖಲಾಸ ಮಾಡಿರಿ, ಜೀವಸಹಿತ ಉಳಿಸಬೇಡರಿ ಎಂದು, ಇತರ ಕೈದಿಗಳಿಗೆ ಪ್ರಚೋದನೆ ನೀಡುತ್ತಾ ಎಲ್ಲರೂ ಅಕ್ರಮ ಕೂಟವಾಗಿ ಸೇರಿಕೊಂಡು, ಹೊಡೆಯಲು ಬಂದಾಗ ಪಿರ್ಯಾದಿ ಹಾಗೂ ಇತರೆ ಸಿಬ್ಬಂದಿಗಳಿಗೆ ಜೈಲಿನಿಂದ ಹೊರಗಡೆ ಹೊರಟು ಬರುತ್ತಿದ್ದಂತೆ, ಮುಖ್ಯ ದ್ವಾರದ ಸರ್ಚ ಗೇಟ ಹತ್ತಿರ ಪೊಲೀಸ ಸಿಬ್ಬಂದಿ ಎಸ್.ಎಚ್ ದೊಟಿಕಲ‌ ಹೆಚ್.ಸಿ 2039 ನೇದವರಿಗೆ ಆರೋಪಿ ಅನಂ. 1 ಮತ್ತು 3 ನೇದವರು ಎಲ್ಲಿಯೂ ಹೋಗದಂತೆ ಹಿಡಿದುಕೊಂಡು ಅಕ್ರಮ ತಡೆಮಾಡಿದ್ದು, ಆಗ ಆರೋಪಿ ಅನಂ.4 ನೇದವನು ಹಾಗೂ ಇತರ ಅಪರಿಚಿತ ಆರೋಪಿತರು ರಸ್ತೆ ಅಕ್ಕ-ಪಕ್ಕ ನೆಟ್ಟ ಇಟ್ಟಿಗೆಗಳನ್ನು ಕಿತ್ತುಕೊಂಡು, ಪೊಲೀಸ ಸಿಬ್ಬಂದಿ ಎಸ್.ಎಚ್ ದೋಟಿಕಲ‌ ಹೆಚ್.ಸಿ 2039 ನೇದ್ದವತ ತಲೆಗೆ ಹಾಗೂ ಅಲ್ಲಲ್ಲಿ ಹೊಡೆದು, ಸಾದಾ ರಕ್ತಗಾಯ ಪಡಿಸಿದ್ದಲ್ಲದೇ ಆರೋಪಿ ಅನಂ. 2 ಮತ್ತು 5 ನೇದವರಿಬ್ಬರೂ ಸಿಬ್ಬಂದಿ ಯು.ಆಯ್ ಕಾಡಮ್ಮನವರ‌ ಪಿ.ಸಿ2870 ನೇದವರಿಗೆ ಬಿಡಬೇಡರಿ ಕೊಂದೇ ಬಿಡಿರಿ ಅಂತ ಜೀವದ ದಮಕಿ ಹಾಕಿ. ಕೂಗುತ್ತಾ, ಕೊಲೆ ಮಾಡುವ ಉದ್ದೇಶದಿಂದ ಇಟ್ಟಿಗೆಗಳಿಂದ ಮೈ ಕೈಗೆ ಹೊಡೆದು, ಇತರ 10-15 ಜನ ಅಪರಿಚಿತ ಬೈದಿಗಳೊಂದಿಗೆ ಸೇರಿಕೊಂಡು ಪೊಲೀಸ ಸಿಬ್ಬಂದಿ ಯು.ಐ. ಕಾಡಮ್ಮನವರ‌ ಪಿ.ಸಿ 2870 ನೇದವರಿಗೆ ನೆಲದ ಮೇಲೆ ಬೀಳಿಸಿ, ಕೈಯಿಂದ ಹೊಡೆಯುತ್ತಾ ಕಾಲಿನಿಂದ ಒದ್ದು, ಎಡಗಡೆ ಭುಜದ ಹತ್ತಿರ ಎಲಬು ಮುರಿದು, ಭಾರಿ ಗಾಯಪಡಿಸಿ, ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ, ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾದಕ್ಕೆ ಕಲಂ.143, 147, 148, 114, 323, 324, 307, 353, 341, 506 ಸಹ ಕಲಂ 149 ಐಪಿಸಿ ನೇದ್ದರ ಅಡಿಯಲ್ಲಿ ಮುರುಗೇಶ ಚೆನ್ನಣ್ಣವರ ಹಾಲಿ ಇನ್ಸ್‌ಪೆಕ್ಟರ್ ಅಂದಿನ ಪಿಎಸೈ (ತನಿಖಾಧಿಕಾರಿ) ಹಾಗೂ ವಿಶ್ವನಾಥ ಹಿರೇಗೌಡರ, ಹಾಲಿ ಇನ್ಸ್‌ಪೆಕ್ಟರ್ ಅಂದಿನ ಪಿಎಸೈ (ಭಾಗಶಃ ತನಿಖಾಧಿಕಾರಿ) ರವರು‌‌ ಮಾನ್ಯ ನ್ಯಾಯಾಲಯಕ್ಕೆ ದೋಷಾರೊಪಣ ಪಟ್ಟಿ ಸಲ್ಲಿಸಿದ್ದರು.

ಅಂತಿಮ ತೀರ್ಪು

ಪ್ರಕರಣದ ವಿಚಾರಣೆ ನಡೆಸಿದ ಧಾರವಾಡ 2ನೇ‌ ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ಗೌ. ನ್ಯಾಯಾಧೀಶೆ ಶ್ರೀಮತಿ ಪಂಚಾಕ್ಷರಿ ಎಂ ರವರು ಕಲಂ:143, 147, 148, 114, 323, 324, 353, 341, 506 ಸಹ ಕಲಂ 149 ಐಪಿಸಿ.‌ನೇದರ ಅಡಿಯಲ್ಲಿ ಆರೋಪಿ
ಆರೋಪಿ- 1 ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ ವಯಾ: 38 ವರ್ಷ ಸಾ:ಮುಂಬೈ ನಾಗಪಾಳ ಆರ್.ಎಸ್.ನೇಮಕರ ಮಾರ್ಕ ಸೌಥ ಪೇಸ ಚಾಳ ರೂಮನ 4 & 5 ಮುಂಬೈ-08 ಹಾಲಿ: ಬೆಂಗಳೂರ ಮುಸ್ಲಿಂ ಕಾಲನಿ ತಾಜ ಸುಲೇಮಾನ ಬಿಲ್ಲಿಂಗ ಕೆಫೆ ಬೋರ್ಡ ಕಾಲನಿ ಕೆ.ಜಿ. ಹಳ್ಳಿ ಬೆಂಗಳೂರ-45 ಸದ್ಯ ಕೇಂದ್ರ ಕಾರಾಗೃಹ ಮೈಸೂರ.

ಆರೋಪಿ-2 ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ ವಯಾ: 28 ವರ್ಷ ಸಾ: ಬೆತ್ತನಗೇರಿ.
ನೆಲಮಂಗಲ ತಾ- ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ.
ಆರೋಪಿ- 3 ಮುನಿರಾಜು ತಂದೆ ಹನಮಂತರಾಯಪ್ಪ ವಯಾ: 24 ವರ್ಷ ಸಾ: ಬೆತ್ತನಗೆರೆ ನೆಲಮಂಗಲ ತಾ-ಜಿ: ಬೆಂಗಳೂರ ಹಾಲಿ: ಕೇಂದ್ರ ಕಾರಾಗೃಹ ಧಾರವಾಡ.
ಆರೋಪಿ- 5 ನೇ ಆರೋಪಿ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ ವಯಾ: 18 ವರ್ಷ ಸಾ: ಧಾರವಾಡ ಹಾವೇರಿ
ಪೇಟ ಮೇದಾರ ಓಣಿ ದ್ಯಾಮವ್ವನಗುಡಿ ಓಣಿ ಹಾಲಿ: ಕೇಂದ್ರ ಕಾರಾಗೃಹ ಧಾರವಾಡನೇದ್ದವರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು 30/07/2020 ರಂದು ಕಾಯ್ದಿರಿಸಲಾಗಿದೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಗಿರಿಜಾ ತಮ್ಮಿನಾಳ ಹಾಗೂ ಸರೋಜಾ ಹೊಸಮನಿ ಸರಕಾರಿ‌ ಅಭಿಯೋಜಕೀಯರು ವಾದ ಮಂಡಿಸಿದ್ದರು.
ಈ ಪ್ರಕರಣದಲ್ಲಿ ಕಾರ್ಯ‌ನಿರ್ವಹಿಸಿದ ಎಲ್ಲ ಅಧಿಕಾರಿ‌ ಮತ್ತು ಸಿಬ್ಬಂದಿಗಳಿಗೆ ಧನ್ಯವಾದಗಳನ್ನ ತಿಳಿಸಲೇಬೇಕಲ್ಲವೇ…!


Spread the love

Leave a Reply

Your email address will not be published. Required fields are marked *