ಇನ್‌ಸ್ಟ್ರಾಗ್ರಾಂನಲ್ಲಿ ಹಡೆದವ್ವಳಿಗೆ ನಿಂದನೆ-ಬೀಯರ್ ಬಾಟ್ಲಿಯಿಂದ ಹಲ್ಲೆ: ಪೋಟೋಗಳಿವೆ…
ಧಾರವಾಡ: ಇನ್‌ಸ್ಟ್ರಾಗ್ರಾಂನಲ್ಲಿ ತನ್ನ ತಾಯಿಗೆ ನಿಂದನೆ ಮಾಡಿದ್ದಾರೆಂದು ಚಾಕು ಹಾಗೂ ಬಿಯರ್ ಬಾಟ್ಲಿಯಿಂದ ಬಡಿದಾಡಿಕೊಂಡ ವಿದ್ಯಾರ್ಥಿಗಳು ಆಸ್ಪತ್ರೆ ಸೇರಿದ ಘಟನೆ ಸಪ್ತಾಪುರದಲ್ಲಿ ನಡೆದಿದೆ.
ಪಿಯುಸಿ ಸೈನ್ಸ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳೇ ಕುಡಿದ ನಶೆಯಲ್ಲಿದ್ದ ಬಡಿದಾಡಿಕೊಂಡಿದ್ದಾರೆ.
ಸಪ್ತಾಪುರದ ಪ್ರಕಾಶ ಲಾಡ್ಜ್ ಮುಂಭಾಗದಲ್ಲಿ ಮನಬಂದಂತೆ ಬಡಿದಾಡಿಕೊಂಡ ವಿದ್ಯಾರ್ಥಿಗಳಿಗೆ ತೀವ್ರ ಥರದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲು ಮಾಡಲಾಗಿದೆ.
ಉಪನಗರ ಠಾಣೆ ಪೊಲೀಸರು ಘಟನೆಯಲ್ಲಿ ಗಾಯಗೊಂಡಿರುವ ಮನೋಜ ಜಮನಾಳ, ಉದಯ ಕೆಲಗೇರಿ, ಸುರೇಶ ಅವರಾಧಿ ಇವರಿಂದ ಮಾಹಿತಿ ಪಡೆದು ಆರು ಜನರನ್ನ ಬಂಧನ ಮಾಡಿದ್ದಾರೆ.