ಧಾರವಾಡ-ಅಣ್ಣಿಗೇರಿ ಸಂತೆ-ಜಾನುವಾರು ಸಂತೆ ರದ್ದು

ಧಾರವಾಡ: ಕೊರೋನಾ ವೈರಸ್ ನಿಂದ ಸಂಭವಿಸಬಹುದಾದ ಅನಾಹುತಗಳನ್ನ ತಪ್ಪಿಸಲು ಧಾರವಾಡದಲ್ಲಿ ಮಾರ್ಚ್ 24 ಮತ್ತು 31ರಂದು ನಡೆಯಲಿದ್ದ ಜಾನುವಾರ ಸಂತೆಯನ್ನ ರದ್ದುಗೊಳಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಾರ್ವಜನಿಕರು ಸಹಕಾರ ನೀಡುವಂತೆ ಕೋರಿದ್ದಾರೆ.
ಕುರಿ-ಮೇಕೆ ಹಾಗೂ ಜಾನುವಾರಗಳನ್ನ ರೈತರು ಮಾರಾಟಕ್ಕೆ ತರಬಾರದೆಂದು ಸಮಿತಿಯ ಕಾರ್ಯದರ್ಶಿ ಎಸ್.ಎಂ.ಮಣ್ಣೂರ ಕೋರಿದ್ದಾರೆ. ಇಂದು ಅಣ್ಣಿಗೇರಿಯಲ್ಲಿ ನಡೆಯಬೇಕಾಗಿದ್ದ ಸಂತೆಯನ್ನ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರದ್ದು ಮಾಡಲಾಗಿದೆ.