ಒಂದೇ ನಂಬರ-ಎರಡು ವಾಹನ: ಧಾರವಾಡದಲ್ಲಿಂದು ನಡೆದ ಕ್ರೈಂ ಏನು..!
1 min readಧಾರವಾಡ: ಆತ ತನ್ನ ತವೇರಾ ವಾಹನವನ್ನ ಚಲಾಯಿಸಿಕೊಂಡು ಹೋಗುತ್ತಿದ್ದ. ಬರೋಬ್ಬರಿ 6ವರ್ಷದ ಹಿಂದಿನ ವಾಹನವದು. ಹಾಗೇಯೇ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮುಂದೆ ನೋಡಿದ್ರೇ ಮತ್ತೊಂದು ತವೇರಾ.. ಅಷ್ಟೇ ಅಲ್ಲ, ತನ್ನ ವಾಹನಗಿದ್ದ ನಂಬರೇ.. ಅಯ್ಯೋ.. ಮಾಲಕನ ಸ್ಥಿತಿ ಏನಾಗಿರಬೇಡಾ.. ಅದೇ ಆಗಿದೆ.
ಹುಬ್ಬಳ್ಳಿ ತಾಲೂಕಿನ ಸುತಗಟ್ಟಿ ಗ್ರಾಮದ ಬಸವರಾಜ ನಿಂಗಪ್ಪ ಕರಗುಳಿ ಎಂಬುವವರೇ ತಮ್ಮದೇ ವಾಹನದ ಡೂಪ್ಲಿಕೇಟ್ ನಂಬರ ನೋಡಿ ಗಾಬರಿಯಾಗಿದ್ದಾರೆ. ತಕ್ಷಣವೇ ಜಾಗೃತರಾದ ಆತ ಆ ವಾಹನವನ್ನ ಹಿಡಿದುಕೊಂಡು ಧಾರವಾಡ ಪೊಲೀಸರಿಗೆ ಒಪ್ಪಿಸಿದ್ದಾರೆ. ತವೇರಾ ವಾಹನದ ಮೇಲೆ ವಿಶ್ವಕರ್ಮ ಎಂದು ಬರೆದುಕೊಂಡು ನಕಲಿ ನಂಬರ ಹಾಕಿಕೊಂಡು ಅಲೆದಾಡುತ್ತಿದ್ದ ವ್ಯಕ್ತಿಯೂ ಕೂಡ ಹೂಲಿಕಟ್ಟಿ ಗ್ರಾಮದ ನಾಗರಾಜ ಎಂಬಾತ.
ತಾನು ಖರೀದಿಸಿದ ವಾಹನದ ಕಂತು ತುಂಬದೇ ಇರುವುದರಿಂದ ವಾಹನದ ಸಂಖ್ಯೆಯನ್ನೇ ಬದಲಾವಣೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಇಂತಹ ಅಪರಾಧ ಎಸಗಿದವರನ್ನ ಹಿಡಿದುಕೊಟ್ಟಿರುವ ಸುತಗಟ್ಟಿಯ ಬಸವರಾಜ, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.
ವಿದ್ಯಾನಗರಿಯಲ್ಲಿನ ಈ ಘಟನೆ ಮತ್ತಷ್ಟು ವಾಹನ ಮಾಲೀಕರಿಗೆ ಎಚ್ಚರಿಕೆ ಗಂಟೆಯಾಗಲಿದೆ. ಪ್ರಕರಣದ ಬಗ್ಗೆ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದು, ನಕಲಿ ನಂಬರ ಹಾಕಿಕೊಂಡಿರುವ ವಾಹನದ ಸಂಪೂರ್ಣ ವಿವರ ಪಡೆಯುತ್ತಿದ್ದಾರೆ.