ಹುಬ್ಬಳ್ಳಿ: ಅಸಲಿ ಬಂಗಾರ ಆಸೆಗೆ 5ವರೆ ಲಕ್ಷ ಲೂಟಿ: 6 ಕಿರಾತಕರ ಬಂಧನ

ಹುಬ್ಬಳ್ಳಿ: ಮೊದಲಿಗೆ ಅಸಲಿ ಬಂಗಾರ ಕೊಟ್ಟು ಆಸೆ ಹುಟ್ಟಿಸಿದ್ದ ತಂಡವೊಂದು, ಮತ್ತೆ ಅರ್ಧ ಕೆಜಿ ಬಂಗಾರ ಕೊಡುವುದಾಗಿ ಹೇಳಿ, ಐದೂವರೆ ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದವರನ್ನ ಹೆಡಮುರಿಗೆ ಕಟ್ಟುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಸುರೇಶ ಟಿ.ವೆಂಕಟಪ್ಪ ಎಂಬುವವರಿಗೆ ಪೂನಾ-ಬೆಂಗಳೂರಿನ ತಾರಿಹಾಳ ಸಮೀಪ ಕರೆಸಿ ಮೊದಲಿಗೆ ಅಸಲಿ ಬಂಗಾರ ಕೊಟ್ಟಿದ್ದ ಕಿರಾಕತರು, ನಂತರ ಅರ್ಧ ಕೆಜಿ ಕೊಡುವುದಕ್ಕೆ 5ವರೆ ಲಕ್ಷ ರೂಪಾಯಿ ತರುವಂತೆ ಹೇಳಿದ್ದರು.
ಅಸಲಿ ಬಂಗಾರ ಸಿಕ್ಕಿದ್ದರಿಂದ ಮತ್ತಷ್ಟು ಆಸೆಯಿಂದ 5ವರೆ ಲಕ್ಷ ರೂಪಾಯಿ ಹಣ ತಂದಾಗ ಕಿರಾತಕರು, ಸುರೇಶ ಮತ್ತು ಆತನ ಜೊತೆಗೆ ಬಂದಿದ್ದ ವಿಜಯಭಾಸ್ಕರನನ್ನ ಹೊಡೆದು ಹಣವನ್ನ ದೋಚಿಕೊಂಡು ಪರಾರಿಯಾಗಿದ್ದರು.
ಪ್ರಕರಣದ ಬೆನ್ನು ಬಿದ್ದ ಪೊಲೀಸರು ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಪ್ರಶಾಂತ ನಾಗಪ್ಪ ಕೊರಚರ, ಪ್ರವೀಣ ನಾಗಪ್ಪ ಕೊರಚರ, ಅನಿಲ ಸುರೇಶ ಕೊರಚರ, ಪರಮೇಶ ಕುಮಾರ ಕೊರಚರ, ಅರುಣ ಬಂಗಾರಪ್ಪ ಕೊರಚರ ಹಾಗೂ ಯಲ್ಲಾಪುರ ತಾಲೂಕಿನ ಹರಪನಹಳ್ಳಿ ಗ್ರಾಮದ ಮಾರುತಿ ಕೆ.ಎಸ್. ಜೀರಪ್ಪ ಎಂಬುವವರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೋಚಿಕೊಂಡು ಹೋಗಿದ್ದ ಹಣದಿಂದ ಕಾರು, ಬೈಕ್, ಬಂಗಾರ ಹಾಗೂ ಮೊಬೈಲ್ ಗಳನ್ನ ಖರೀದಿ ಮಾಡಿದ್ದರು. ಇದೇಲ್ಲವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ಪಿಎಸೈಗಳಾದ ಮಂಜುಳಾ ಸದಾರಿಯವರ, ಡಿ.ಚಾಮುಂಡೇಶ್ವರಿ. ಪ್ರೋಬೆಷನರಿ ಪಿಎಸೈ ನರಸಿಂಹರಾಜು, ಸಿಬ್ಬಂದಿಗಳಾದ ಎನ್.ಐ.ಹಿರೇಹೊಳಿ, ಮಂಜುನಾಥ ಹೆಳವರ, ಮಹಾಂತೇಶ ನಾನಾಗೌಡ, ಎಂ.ಆರ್.ಗೋಲಂದಾಜ, ಮಾಲತೇಶ ಬಾರ್ಕಿ, ಡಿ.ಎಲ್.ಕರಬಣ್ಣನವರ, ವೈ.ಡಿ.ಕಂಬಾರ, ಎಸ್.ಐ.ಗಾಯಕವಾಡ ಹಾಗೂ ಪ್ರವೀಣ ಸೇರಿದಂತೆ ಇನ್ನುಳಿದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.