Posts Slider

Karnataka Voice

Latest Kannada News

ಇಲ್ಲದ ಚಾನಲ್ ಹೆಸರೇಳುತ್ತಿದ್ದ “ನಕಲಿ”ಯ ಬಂಧನ- ಡಿಸಿಪಿ ಕೈಯಲ್ಲಿ ಸಿಕ್ಕಿಬಿದ್ದ “420”…

Spread the love

ಹುಬ್ಬಳ್ಳಿ: ತಾನೊಬ್ಬ ಪತ್ರಕರ್ತ ನೆಂದು ಹೇಳಿಕೊಂಡು ಖಾಸಗಿ ವಾಹಿನಿ ಈಟಿವಿ ಯ ನಕಲಿ ಗುರುತಿನ ಚೀಟಿಯನ್ನು ಇಟ್ಟುಕೊಂಡು ತಿರುಗುತ್ತಿದ್ದ ಅಸಾಮಿಯನ್ನು ಖುದ್ದು ಹುಬ್ಬಳ್ಳಿ ಧಾರವಾಡ ಡಿಸಿಪಿ ರಾಮರಾಜನ್ ಹಿಡಿದಿದ್ದಾರೆ.

ಲಾಕ್ ಡೌನ್ ಹಿನ್ನೆಲೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಬೈಕ್ ಸವಾರನೊಬ್ಬ ತನ್ನ ಬೈಕಿಗೇ  ಪ್ರೆಸ್ ಎಂದು ಬರೆಸಿಕೊಂಡು ತಿರುಗುತ್ತಿದ್ದ.

ಇದನ್ನು ಕಂಡ ಡಿಸಿಪಿ ರಾಮರಾಜನ್ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಈತ ಪತ್ರಕರ್ತನಲ್ಲ ಎಂಬ ಮಾಹಿತಿ ಗೊತ್ತಾದ ಕೂಡಲೇ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಕರೆದೊಯ್ದು   420 ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಜಾಕ್ ನಿಲೋಸನ್ ಎಂ ಎಂಬಾತನೇ ಡಿಸಿಪಿ ಹತ್ತಿರ ಸಿಲುಕಿಕೊಂಡ ವ್ಯಕ್ತಿಯಾಗಿದ್ದು, ಬೈಕ್ ನ್ನ ವಶಕ್ಕೆ ಪಡೆದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *