ಮಾಜಿ ಗೃಹ ಸಚಿವರ ತಂದೆ ಸಾವು: ಹಿರಿಯ ಕಾಂಗ್ರೆಸ್ಸಿಗ ಇನ್ನಿಲ್ಲ
ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಹಿರಿಯ ಕಾಂಗ್ರೆಸ್ ಮುಖಂಡ ದುದನಿಯ ಸಾತಲಿಂಗಪ್ಪ ಮೇತ್ರೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
78 ವರ್ಷದ ಸಾತಲಿಂಗಪ್ಪ ಮೇತ್ರೆ 20 ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ದುದನಿ ನಗರ ಸಭೆಯ ಅಧ್ಯಕ್ಷರಾಗಿದ್ದರು. ಮಹಾರಾಷ್ಟ್ರ ಅಷ್ಟೇ ಅಲ್ಲದೇ ಕರ್ನಾಟಕದ ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲೂ ಸಾಕಷ್ಟು ಪ್ರಭಾವವನ್ನ ಹೊಂದಿದ್ದರು.
ಇವರ ಮಗ ಸಿದ್ದರಾಮ ಮೇತ್ರೆ ಮಹಾರಾಷ್ಟ್ರದಲ್ಲಿ ಈ ಹಿಂದೆ ಗೃಹ ಸಚಿವರಾಗಿದ್ದರು. ಕಾಂಗ್ರೆಸ್ ಪಕ್ಷದಿಂದಲೇ ಆರಂಭಗೊಂಡಿದ್ದ ಇವರ ರಾಜಕೀಯ, ಕೊನೆವರೆಗೂ ಕಾಂಗ್ರೆಸ್ ಬಲಕ್ಕಾಗಿಯೇ ಇರುವಂತಾದರು.
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಹಿರಿಯ ಮುಖಂಡ ಸಾತಲಿಂಗಪ್ಪ ಮೇತ್ರೆ ಸಾಕಷ್ಟು ಬೆಂಬಲವನ್ನು ನೀಡುವಂತ ಕಾರ್ಯಕರ್ತರ ಪಡೆಯನ್ನ ಸೃಷ್ಟಿಸಿದ್ದರು.