ಧಾರವಾಡ: “ಬಂದ್” DSS-ACHR-ಜಯ ಕರ್ನಾಟಕ ಬೆಂಬಲ
ಧಾರವಾಡ: ರೈತವಿರೋಧಿ ಕಾಯ್ದೆಗಳನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಡಿ.ಎಸ್.ಎಸ್ (ಅಂಬೇಡ್ಕರ ವಾದ), ಜಯ ಕರ್ನಾಟಕ ಸಂಘಟನೆ ಹಾಗೂ ಎ.ಸಿ.ಎಚ್.ಆರ್ ಸಂಘಟನೆಗಳ ಬೆಂಬಲ ನೀಡಿವೆ.
ರೈತರು ಈ ದೇಶದ ಅನ್ನದಾತರು ಇಡೀ ದೇಶಕ್ಕೆ ಹೆಮ್ಮೆಯ ಪ್ರಜೆಗಳು. ಜೈ ಜವಾನ್ ಜೈ ಕಿಸಾನ್ ಎಂಬ ಹಿರಿಯರ ಉಕ್ತಿಯಂತೆ ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ದುಡಿದು ಸುಣ್ಣವಾಗುವ ಮುಗ್ದ ಜೀವಿ ಇವರು.
ಸಮಸ್ತ ದೇಶದ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವ ರೈತರ ಭಾವನೆಗಳನ್ನು ಹತ್ತಿಕ್ಕುವ ವಿವಾದಾತ್ಮಕ ವಿಧೇಯಕಗಳನ್ನು ಬಲವಂತವಾಗಿ ಹೇರಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿಲುವನ್ನು ತೀವ್ರವಾಗಿ ವಿರೋಧಿಸಿ ನಗರದ ಆಲೂರ ವೆಂಕಟರಾವ್ ವೃತ್ತದಲ್ಲಿ ನಾಳೆ ಬೆಳಿಗ್ಗೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಿವೆ.
ಉದ್ದೇಶಿತ ಪ್ರತಿಭಟನೆಯ ನೇತೃತ್ವವನ್ನು ಲಕ್ಷ್ಮಣ ಈ ದೊಡಮನಿ, ಸುಧೀರ ಮುಧೋಳ, ಬಸವರಾಜ ಆನೇಗುಂದಿ, ನಾರಾಯಣ ಮಾದರ, ಪರಶುರಾಮ ಕೊರವರ, ಹನುಮಂತ ಮೊರಬ, ಶಬ್ಬೀರ ಅತ್ತಾರ, ಅಂದರಖಂಡಿ, ಅಲ್ತಾಫ ಜಾಲೇಗಾರ, ಕಿಶೋರ ಕಟ್ಟಿ, ಭಾಸ್ಕರ್ ಭೋಗಲೆ, ಡಿ.ಟಿ. ಚಲವಾದಿ, ಚಂದ್ರು ಅಂಗಡಿ, ಮಂಜು ಸುತಗಟ್ಟಿ, ಸಿಡ್ಲೆಪ್ಪ ಹೆಗಡೆ, ಬಸವರಾಜ ಮಾದರ, ಪ್ರಕಾಶ ಹೂಗಾರ, ರಾಮು ಹರಿಜನ, ಕರಿಯಪ್ಪ ಮಾಳಗಿಮನಿ, ಪಂಚಯ್ಯ ಪೂಜಾರ ಮುಂತಾದವರು ವಹಿಸಲಿದ್ದಾರೆ.