ಎದೆಗುಂದಿದ್ದ ಆಂಜನೇಯ ಭಕ್ತ ಧ್ರುವಸರ್ಜಾ ಮತ್ತೇ ಫೀಲ್ಡಿಗೆ: ವರ್ಕೌಟ್ ಹೆಂಗಿದೆ ಗೊತ್ತಾ…!
ಬೆಂಗಳೂರು: ಹಠಾತ್ತಾಗಿ ಎರಗಿದ ಅಣ್ಣ ಚಿರಂಜೀವಿ ಸರ್ಜಾ ಸಾವು, ಅದರ ಬೆನ್ನಲ್ಲೇ ಹೆಚ್ಚಿದ ಜವಾಬ್ದಾರಿಗಳಿಂದ ಸುಸ್ತಾಗಿದ್ದ ಧ್ರುವ ಸರ್ಜಾ ಹೊರಜಗತ್ತಿಗೆ ಕಾಣಿಸಿಕೊಂಡಿರಲಿಲ್ಲ. ಅತ್ತ ಗಾಬರಿಯಾಗಿದ್ದ ಅಭಿಮಾನಿಗಳು ಅವರ ಮನೆ ಮುಂದೆ ನಿಂತು ಹೊರಗೆ ಬನ್ನಿ ನಿಮ್ಮನ್ನು ಎಂದು ಬೇಡಿಕೊಳ್ಳುವಾಗಲೇ, ಧ್ರುವ ಸರ್ಜಾ ತಮಗೆ ಹಾಗೂ ತಮ್ಮ ಪತ್ನಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಕೂಡಾ. ಆದರೀಗ ಹೊಸ ಹುರುಪಿನಲ್ಲಿರುವ ಮಾಹಿತಿ ಸಿಕ್ಕಿದೆ.
ಧ್ರುವ ಸರ್ಜಾ ಮಾನಸಿಕವಾಗಿಯೂ ದೈಹಿಕವಾಗಿಯೂ ಫೀಟ್ ಆಗ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿಗಳು ದೊರೆತಿವೆ. ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ಬಳಿಕ ವರ್ಕೌಟ್ ಮಾಡುತ್ತಾ ಇನ್‌ಸ್ಟಾಗ್ರಾಂನಲ್ಲಿ ಕೆಲವು ನಿಮಿಷ ಲೈವ್ ಬಂದಿದ್ದ ಧ್ರುವ ಅಭಿಮಾನಿಗಳ ಜತೆಗೆ ಮಾತನಾಡಿದ್ದರು. ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವರು ದೈನಂದಿನ ಚಟುವಟಿಕೆಗಳಿಗೆ ಮರಳಿರುವುದು ಸಮಾಧಾನ ತಂದಿದೆ.
‘ಹಾಯ್ ಗುಡ್‌ಮಾರ್ನಿಂಗ್. ಈಗ ಬೆಳಿಗ್ಗೆ ಐದು ಗಂಟೆ. ಈಗಷ್ಟೇ ಒಂದು ಗಂಟೆ ಓಡಿ, ಈಗ ವರ್ಕೌಟ್ ಶುರುಮಾಡುತ್ತಿದ್ದೇವೆ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಯಾವಾಗಲೂ ಕಟ್ಟುನಿಟ್ಟಾಗಿದ್ದ ಧ್ರುವ ಸರ್ಜಾ, ಈಗ ಎಂದಿನಂತೆ ವರ್ಕೌಟ್ ಶುರುಮಾಡಿದ್ದಾರೆ. ಅವರ ಧ್ವನಿಯಲ್ಲಿಯೂ ಹಿಂದೆ ಇದ್ದ ಆಯಾಸವಿಲ್ಲ. ಹೀಗಾಗಿ ಧ್ರುವ ಅವರು ತಮ್ಮ ಹಿಂದಿನ ಚಟುವಟಿಕೆಗಳಿಗೆ ಮರಳಿರುವುದು ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದೆ.