ನವಲಗುಂದದಲ್ಲಿ “ಕುಡುಕರನ್ನ ಕರೆಸಿ ಕುಣಿಸಿದ ಕೋನರೆಡ್ಡಿ”: ವೇದಿಕೆಯಲ್ಲೇ ‘ಗುಮ್ಮಿದ ಟಗರು’…

ನವಲಗುಂದ: ಕುಡುಕರನ್ನ ಕರೆಸಿ ಕುಣಿಸ್ತೀರಾ. ನಾಚಿಗೆ ಆಗಲ್ವೆ ನಿಮಗೆ. ನಾನು ಹೀಗೆ ಮಾಡಿದರೇ ಭಾಷಣ ಮಾಡೋದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವೇದಿಕೆಯಲ್ಲಿ ಮಾಜಿ ಶಾಸಕ ಕೋನರೆಡ್ಡಿ ಮತ್ತು ವಿನೋದ ಅವರನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಈ ಬಗ್ಗೆ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಮಾತನಾಡಲು ಆರಂಭಿಸುತ್ತಿದ್ದ ಹಾಗೇ ಕೆಲವರು ‘ಕೋನರೆಡ್ಡಿಯವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರೇ ಇನ್ನೂ ಕೆಲವರು ವಿನೋದ ಅಸೂಟಿ ಪರವಾಗಿ ಘೋಷಣೆ ಕೂಗತೊಡಗಿದರು. ಇದರಿಂದ ರೋಸಿ ಹೋದ ಸಿದ್ಧರಾಮಯ್ಯನವರು ಭಾಷಣ ಮಾಡದೇ ಕೂತು, ತಮ್ಮ ಆಕ್ರೋಶವ್ಯಕ್ತಪಡಿಸಿದರು.