ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ದೇವಸ್ಥಾನದ ಅರ್ಚಕನ ಬಂಧನ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದ ಎಂಬಲ್ಲಿನ ಅರ್ಚಕರು ಒಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಇಲ್ಲಿನ ಮಾಯ್ನೇರಮನೆಯ ಚಂದ್ರಶೇಖರ ಭಟ್ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸೆರೆಯಾಗಿದ್ದಾರೆ.

ಅರ್ಚಕ ಚಂದ್ರಶೇಖರ್ ಭಟ್ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಗಾಂಜಾ ಪತ್ತೆಯಾಗಿದೆ. ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಗಾಂಜಾ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಿದ್ದಾಪುರ ತಾಲೂಕಿನ ಮಾಯ್ನೇರ್‌ಮನೆ ಕುಗ್ರಾಮವಾಗಿದೆ. ಚಂದ್ರಶೇಖರ್ ಭಟ್ ಸ್ಥಳೀಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದರು. ಗಾಂಜಾ ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಮಾಹಿತಿ ಮೇರೆಗೆ ಅರ್ಚಕರ ಮನೆಗೆ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದರು. ಖಚಿತ ಮಾಹಿತಿ ಪಡೆದ ಅಬಕಾರಿ ಡಿ.ಎಸ್.ಪಿ. ಮಹೇಂದ್ರ ನಾಯ್ಕ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.
ಅಧಿಕಾರಿಗಳು ಮನೆ ಶೋಧಕ್ಕಿಳಿದಾಗ ಏನೇನೋ ದಡಬಡಾಯಿಸಿದ ಆರೋಪಿ ಬಳಿಕ ಶೋಧಕ್ಕೆ ಅನುಮತಿ ನೀಡಿದ್ದರು. ಎಲ್ಲಿಯೂ ಗಾಂಜಾ ಸಿಗದೇ ಹೋಗಿತ್ತು. ಕೊನೆಗೆ ಆರೋಪಿಯ ಅಡುಗೆ ಕೊಣೆಗೆ ಹೊಕ್ಕಿದ್ದ ಸಿಬ್ಬಂದಿ, ಅಡುಗೆ ಮನೆಯ ಗ್ಯಾಸ್ ಕಟ್ಟೆಯ ಕೆಳಗಡೆ ಗಾಂಜಾ ಬಚ್ಚಿಟ್ಟಿದ್ದನ್ನು ಪತ್ತೆಹಚ್ಚಿದ್ದರು. 140 ಗ್ರಾಂ ಗಾಂಜಾ ಪ್ಯಾಕೇಟನ್ನು ಅಡುಗೆ ಮನೆಯ ಡಬ್ಬಾದಲ್ಲಿ ಪ್ಯಾಸ್ಟಿಕ್ ಚೀಲದಲ್ಲಿ ತುಂಬಿಡಲಾಗಿತ್ತು.