ನಾಳೆಯಿಂದ “ದಾರೂ” ವ್ಯವಹಾರ ಶುರು: ಹೊಡೀರಿ ಹಲಗಿ

ಬೆಂಗಳೂರು: ತೀವ್ರ ಬೇಡಿಕೆಯಾಗಿದ್ದ ಮದ್ಯ ಮಾರಾಟ ಮಾಡಲು ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದ್ದು, ಕುಡುಕರಲ್ಲಿ ಹರ್ಷ ಮೂಡಿಸಿದೆಯಾದರೂ, ಪ್ರಜ್ಞಾವಂತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಲಾಕ್ ಡೌನ್ ಆರಂಭವಾದಾಗಿನಿಂದ ಮದ್ಯದ ಅಮಲು ಇಲ್ಲದೇ ಪರಿತಪಿಸುತ್ತಿದ್ದ ಕೆಲವರು ಆಗಾಗ, ಸರಕಾರ ಮಾರಾಟ ಆರಂಭಿಸಬೇಕೆಂದು ಒತ್ತಾಯ ಮಾಡುತ್ತಿದ್ದರು. ಇತ್ತೀಚೆಗೆ ವೈದ್ಯರೋರ್ವರು ನ್ಯಾಯಾಲಯಕ್ಕೆ ಪಿಐಎಲ್ ಕೂಡಾ ಹಾಕಿದ್ದರು.
ಈ ಎಲ್ಲ ಘಟನೆಗಳ ನಡುವೆಯೇ ಶರತುಬದ್ಧ ಮದ್ಯ ಮಾರಾಟಕ್ಕೆ ರಾಜ್ಯ ಸರಕಾರ ಮುಂದಾಗಿದ್ದು, ಮತ್ತೇನು ಅವಘಡಗಳು ಶುರುವಾಗುತ್ತವೋ ಕಾದು ನೋಡಬೇಕಿದೆ.