ರಾಯಚೂರು: ಡಾ.ಹರೀಶಮೂರ್ತಿಯನ್ನೇ ಲಂಚ ಕೇಳಿದ ಜಿಲ್ಲಾಸ್ಪತ್ರೆ: ಡಾಕ್ಟರ್ ಹೆಂಗೆ ಗೊತ್ತಾ..?
1 min readರಾಯಚೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಹಾಗೇ ಜಿಲ್ಲಾಸ್ಪತ್ರೆಯಲ್ಲಿ ಲಂಚಬಾಕತನವೂ ಹೆಚ್ಚುತ್ತಿದೆ. ಅದೇ ಕಾರಣಕ್ಕೆ ಪಟ್ಟಣದ ಪ್ರತಿಷ್ಠಿತ ವೈದ್ಯರು ಜಿಲ್ಲಾಸ್ಪತ್ರೆಗೆ ಹೋಗಿ ಏನು ಮಾಡಿದ್ರು ಎನ್ನೋದನ್ನ ನೀವು ವೀಡಿಯೋದಲ್ಲಿ ನೋಡಬಹುದು.. ಇಲ್ಲವೇ ಈ ವರದಿಯನ್ನ ಪೂರ್ತಿಯಾಗಿ ಓದಿ.
ತಜ್ಞವೈದ್ಯ ಡಾ.ಹರಿಶಮೂರ್ತಿಯವರ ಸುರಕ್ಷಾ ಆಸ್ಪತ್ರೆಯ ಪೈಲ್ ಗೆ ಸಹಿ ಮಾಡಲು ಮತ್ತೆ ಐದು ಸಾವಿರ ರೂಪಾಯಿ ಲಂಚವನ್ನ ಕೇಳಿದ್ದಾರೆ. ಲಂಚ ಕೊಡದೇ ಇದ್ದರೆ ನಿಮ್ಮ ಕೆಲಸ ಆಗುವುದಿಲ್ಲವೆಂಬ ಸಂದೇಶವನ್ನ ಡಿಹೆಚ್ಓ ಕಛೇರಿ ಸಿಬ್ಬಂದಿ ಅಮರೇಶ್ ವೈದ್ಯರಿಗೆ ಮುಟ್ಟಿಸಿದ್ದಾನೆ.
ಇದರಿಂದ ರೋಸಿ ಹೋದ ಡಾಕ್ಟರ್ ಹರೀಶಮೂರ್ತಿ ಜಿಲ್ಲಾಸ್ಪತ್ರೆ ಬೇಡಿ, ಸರಕಾರದ ಎಲ್ಲ ಫೀಸ್ ತುಂಬಿದ ಮೇಲೂ ಐದು ಸಾವಿರ ಕೊಡಬೇಕಾ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಡಾ.ಹರೀಶಮೂರ್ತಿ ಸಿಬ್ಬಂದಿಗಳನ್ನ ತರಾಟೆಗೆ ತೆಗೆದುಕೊಂಡಿದ್ದೇ ತಡ, ಎಲ್ಲರೂ ಬೇರೆ ಬೇರೆ ಥರದಲ್ಲಿ ಮಾತನಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಲಂಚ ಯಾಕೆ ಪಡೆಯುತ್ತಿದ್ದೇವೆ ಎಂಬುದನ್ನ ಹೇಳಿಲ್ಲ. ಈ ವೀಡಿಯೋ ವೈರಲ್ ಆಗಿದ್ದು, ಜಿಲ್ಲಾಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಿಕಿತ್ಸೆ ನೀಡಬೇಕಿದೆ.