ಆರಿದ ‘ಕರ್ಪೂರ’: ಹೃದಯಾಘಾತದಿಂದ ದೂರವಾದ ಹಿರಿಯ ಜೀವ: ಶೆಟ್ಟರ್, ಡಂಗನವರ ಸಂತಾಪ
ಹುಬ್ಬಳ್ಳಿ: ವಾಣಿಜ್ಯನಗರಿಯ ಖ್ಯಾತಿಯನ್ನ ವಿದೇಶದಲ್ಲೂ ಹೆಚ್ಚಿಸಿದ್ದ, ಸಾವಿರಾರೂ ಜನರ ಆರೋಗ್ಯ ಕಾಪಾಡಿದ ಹಿರಿಯ ವೈದ್ಯ ಡಾ.ವಿ.ಡಿ.ಕರ್ಪೂರಮಠ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿವೃತ್ತಿಯ ನಂತರವೂ ಕೊನೆಯುಸಿರಿರುವರೆಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ.ಸುಲೋಚನಾ, ಪುತ್ರರಾದ ವಿವೇಕ್ ಹಾಗೂ ಕ್ಯಾನ್ಸರ್ ತಜ್ಞ ಡಾ.ಡಾ.ಶಶಿ ಕರ್ಪೂರಮಠ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದಶಕಗಳಿಂದ ಜನಸೇವೆಯಲ್ಲಿ ತೊಡಗಿದ್ದ ಡಾ.ವಿ.ಡಿ.ಕರ್ಪೂರಮಠ ನವನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದು, ಇಂದು ಮಧ್ಯಾಹ್ನ 12.30ಕ್ಕೆ ನವನಗರದ ರುದ್ರಭೂಮಿಯಲ್ಲಿ ನಡೆಯಲಿದೆ.
ಡಾ.ಕರ್ಪೂರಮಠ ಜನಸೇವೆಯಲ್ಲಿ ವಿಭಿನ್ನ ದಾರಿಯನ್ನ ಕಂಡು ಹಿಡಿದು ಜನರ ಬಳಿ ಹೋದವರು. ಉಚಿತವಾದ ಆರೋಗ್ಯ ತಪಾಸಣಾ ಶಿಬಿರಗಳನ್ನ ಆಯೋಜಿಸಿ, ಜನರ ಆರೋಗ್ಯವನ್ನ ಕಾಪಾಡಲು ಅವರ ಬಳಿಯೇ ಹೋದವರು.
ಹುಬ್ಬಳ್ಳಿಯ ವೈಧ್ಯಲೋಕದ ಕೀರ್ತಿಯಲ್ಲಿ ಡಾ.ವಿ.ಡಿ.ಕರ್ಪೂರಮಠ ಅಚ್ಚಳಿಯದೇ ಉಳಿಯುತ್ತಾರೆ. ಇವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಚಿವರ ಸಂತಾಪ
ಡಾ.ವಿ.ಡಿ.ಕರ್ಪೂರಮಠ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಸಾರ್ಥಕ ಬದುಕು ಮತ್ತು ಸೇವಾ ಮನೋಭಾವವನ್ನು ಸ್ಮರಿಸಿದ್ದಾರೆ.