Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯಲ್ಲಿ ಸದ್ದಿಲ್ಲದೇ ಸಹಾಯ ಮಾಡುತ್ತಿರುವ ಡಾ.ಸೀಮಾ ಸಾಧೀಕಾ…!

1 min read
Spread the love

ಧಾರವಾಡ ಜಿಲ್ಲೆಯಲ್ಲಿ ಕಡಿಮೆಯಾಗುವ ಔಷಧ ಹಾಗೂ ಇಂಜೆಕ್ಷನ್ ಕೊರತೆ ಬಂದ ತಕ್ಷಣವೇ ಸರಕಾರದ ಗಮನಕ್ಕೆ ತರುವುದರಲ್ಲಿಯೂ ಡಾ.ಸೀಮಾ ಸಾಧೀಕಾ ಅವರು, ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ..

ಬೆಂಗಳೂರು: ಕೋವಿಡ್-19 ಎರಡನೇಯ ಅಲೆ ಮಾನವನನ್ನ ಮುದುಡಿ ಹಾಕುತ್ತಿರುವ ಸಮಯದಲ್ಲಿಯೇ ರಾಜಧಾನಿಯಲ್ಲಿಯೇ ಕುಳಿತು ಹಲವರಿಗೆ ಹಲವು ರೀತಿಯಲ್ಲಿ ಸಂಜೀವಿನಿಯಾಗಿ ಕೆಲಸ ಮಾಡುತ್ತಿದ್ದಾರೆ ನಮ್ಮ ಮಿತ್ರ ಪೌಂಢೇಷನ್ ಸಂಸ್ಥಾಪಕಿ ಡಾ.ಸೀಮಾ ಸಾಧೀಕಾ.

ಹೌದು.. ಧಾರವಾಡ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದ ಗ್ರಾಮೀಣ ಹಾಗೂ ಶಹರ ಪ್ರದೇಶದಲ್ಲಿ ಬಡವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಬರುತ್ತಿರುವ ಡಾ.ಸೀಮಾ ಸಾಧೀಕಾ, ಕೊರೋನಾ ಸಮಯದಲ್ಲಿ ಹಲವರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಸಹಾಯವನ್ನ ನೆನೆಯುವ ನೂರೆಂಟು ಜನರು ಧಾರವಾಡ ಜಿಲ್ಲೆಯಲ್ಲಿದ್ದಾರೆ. ಆ ಬಗ್ಗೆ ಟ್ವೀಟ್ ಮಾಡುವ ಮೂಲಕ ಡಾ.ಸೀಮಾ ಸಾಧೀಕಾ ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ನಮ್ಮ ಮಿತ್ರದ ಡಾ.ಸೀಮಾ ಸಾಧೀಕಾ, ಡಾ.ಬಿ.ಆರ್.ಪಾಟೀಲ ಆಸ್ಪತ್ರೆಗೆ 23  0xygen concentrators ಗಳನ್ನ ತಲುಪುವ ಹಾಗೇ ಬೇರೆ ಸಂಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಮೆರಿಕಾ ಇಂಡಿಯಾ ಫೌಂಡೇಷನ್ ಮೂಲಕವೇ, ದೇಶಪಾಂಡೆ ಫೌಂಡೇಷನ್ ಕೂಡಾ ಧಾರವಾಡ ಜಿಲ್ಲಾಧಿಕಾರಿಗಳಿಗೆ 40  0xygen concentrators ಕೊಟ್ಟಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ಡಾ.ಸೀಮಾ ಸಾಧೀಕಾ ಅವರು, ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಗೊತ್ತಿರೋರು. ಹೀಗಾಗಿಯೇ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಕರೆಗಳಿಗೆ ಅವರಿಗೆ ಬೇಕಾದ ಸವಲತ್ತು ಕೊಡಿಸುವುದಕ್ಕೆ ಮುಂದಾಗಿದೆ.

ಡಾ.ಸೀಮಾ ಸಾಧೀಕಾ ಅವರು, ರಾಜಕಾರಣಿಗಳ ಸಹಾಯ ಪಡೆಯದೇ ತಮ್ಮದೇ ಆದ ರೀತಿಯಲ್ಲಿ ಕಾರ್ಯವನ್ನ ನಿರ್ವಹಿಸಿ, ನೂರಾರೂ ಜನರಿಗೆ ಸಹಾಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ.


Spread the love

Leave a Reply

Your email address will not be published. Required fields are marked *

You may have missed