ಡಾ.ಪಾಪು ಆರೋಗ್ಯ ವಿಚಾರಿಸಿದ ಈಶ್ವರ ಖಂಡ್ರೆ

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶತಾಯುಷಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಆರೋಗ್ಯವನ್ನ ವಿಚಾರಿಸಿದ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ, ಅವರೊಂದಿಗೆ ಮಾತನಾಡುವ ಪ್ರಯತ್ನ ಮಾಡಿದರು.
ಡಾ.ಪಾಪು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಈಶ್ವರ ಖಂಡ್ರೇ, ನಮಗೆಲ್ಲ ಹಾಗೂ ಅದರಲ್ಲೂ ಉತ್ತರ ಕರ್ನಾಟಕದ ಜನರ ಪಾಲಿಗೆ ಅವರೊಬ್ಬ ಆದರ್ಶ ವ್ಯಕ್ತಿ. ಸಮಾಜದ ಬಗ್ಗೆ ಅತ್ಯಂತ ಕಳಕಳಿಯ ಭಾವನೆ ಇಟ್ಟುಕೊಂಡು ಅನೇಕ ಚಳುವಳಿಯನ್ನು ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅಭಿವೃದ್ಧಿಯ ಕೊಡುಗೆ ನೋಡಿದ್ದಾರೆ ಎಂದರು.
ನಾನು ಮಾತನಾಡಿಸುವ ಸಂದರ್ಭದಲ್ಲಿ ನನಗೆ ಸ್ಪಂದನೆ ಕೂಡಾ ಮಾಡಿದ್ದಾರೆ ನಮಗೆ ಅವರ ಮಾರ್ಗದರ್ಶನ ಇನ್ನು ಬೇಕಾಗಿದೆ. ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಅವರು ಬೇಗ ಗುಣಮುಖವಾಗಲಿ ಎಂದು ಖಂಡ್ರೆ ಕೇಳಿಕೊಂಡರು.